ಇತ್ತೀಚೆಗಿನ ದಿನಗಳಲ್ಲಿ ಉಷ್ಣಾಂಶವು ನಿರಂತರವಾಗಿ ಏರಿಕೆಯಾಗುತ್ತಿರುವುದರ ನಡುವೆ ಬೆಟ್ಟದ ತಪ್ಪಲು, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹುಲ್ಲುಗಾವಲುಗಳು ಒಣಗಿದ ರೀತಿಯಲ್ಲಿ ಕಾಣಿಸುತ್ತಿವೆ. ಎಲೆಗಳು ಉದುರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಲ್ಲಿ ಕಾಡ್ಗಿಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಸುಲ್ತಾನ್ ಪೇಟೆ ಮಾರ್ಗದ ನಂದಿ ಬೆಟ್ಟದ ತಪ್ಪಲಿನಲ್ಲಿ ಬೆಂಕಿ ಕಾಣಿಸಿಕೊಂಡು ಹರಡಿದೆ. ತಳಮಟ್ಟದಿಂದ ಮೇಲ್ಮಟ್ಟಕ್ಕೆ ವ್ಯಾಪಿಸಿದೆ. ಇದರ ಹಿಂದೆ ಕಿಡಿಗೇಡಿಗಳು ಕೈವಾಡ ಇದೆ ಎಂದು ಶಂಕಿಸಲಾಗಿದೆ. ಇನ್ನು ಸ್ಥಳೀಯರು, ಅರಣ್ಯ ಇಲಾಖೆ ಹಾಗೂ ನಂದಿ ಗಿರಿಧಾಮದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಮಾಡಿದರು.