ಸರ್ಕಾರಿ ಅಧಿಕಾರಿಗೆ ಕೈ ನಾಯಕನ ನಿಂದನೆ, ವೈರಲ್‌ ಆದ ಆಡಿಯೋದಲ್ಲೇನಿದೆ?

ಶಾಸಕ ಪ್ರದೀಪ್‌ ಈಶ್ವರ್‌ ಜತೆಗೆ ಆರೋಪಿ ನಾಗೇಶ್‌ ರೆಡ್ಡಿ
ಶಾಸಕ ಪ್ರದೀಪ್‌ ಈಶ್ವರ್‌ ಜತೆಗೆ ಆರೋಪಿ ನಾಗೇಶ್‌ ರೆಡ್ಡಿ
Published on

ಚಿಕ್ಕಬಳ್ಳಾಪುರ: ಮತದಾರ ಪಟ್ಟಿ ಮ್ಯಾಪಿಂಗ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್‌ ಅಧ್ಯಕ್ಷ ನಾಗೇಶ್‌ ರೆಡ್ಡಿ ಹಾಗೂ ಮತಗಟ್ಟೆ ಅಧಿಕಾರಿ ಶಿವಶಂಕರ್‌ ನಡುವಿನ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರಲ್ಲಿ ಕರ್ತವ್ಯ ನಿರ್ವಹಣೆಯ ಲೋಪಗಳನ್ನು ಮುಂದಿಟ್ಟುಕೊಂಡು ನಾಗೇಶ್‌ ರೆಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಆಡಿಯೋದಲ್ಲೇನಿದೆ?

ನಾಗೇಶ್‌ ರೆಡ್ಡಿ: ನೀನು ನಮ್ಮ ಊರಲ್ಲಿದ್ದಿಯಾ?, ಯಾವ ರೂಲ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದೀಯಾ? ನೀನು ಹೆಂಗೆ ಪ್ರಶ್ನೆ ಕೇಳುತ್ತೀಯಾ?.

ಶಿವಶಂಕರ: ನಾನು ಊರಲ್ಲಿ ಇಲ್ಲ. ಆದರೆ, ಮತದಾರ ಮ್ಯಾಪಿಂಗ್‌ ಕೆಲಸ ನಾನೇ ಮಾಡಬೇಕು,

ನಾಗೇಶ್‌ ರೆಡ್ಡಿ: ನೀನು ಬಿಜೆಪಿಯ ದೊಡ್ಡ ಬಕೆಟ್‌, ನೀನು ಬಿಜೆಪಿಯನ್ನು ಬೆಂಬಲಿಸುತ್ತಿದ್ದೀಯ, ಇದು ನನಗೆ ಗೊತ್ತು

ಶಿವಶಂಕರ: ನೀನು ಹಿಂಗೆಲ್ಲಾ ಮಾತನಾಡಬಾರದು. ಸಂಬಂಧವಿಲ್ಲದಿರುವ ವಿಚಾರ, ಅದು ಬೇರೆ, ಇದು ಬೇರೆ,

ನಾಗೇಶ್‌ ರೆಡ್ಡಿ: ನನ್ನ ಮೇಲೆ ಈಗಾಗಲೇ ಎರಡು ಕೇಸ್‌ ಇದೆ. ಏನು ಮಾಡುತ್ತಿಯೋ ಮಾಡು, ನಿನ್ನ ಕೈಯಲ್ಲಿ ಏನು ಮಾಡಲು ಆಗಲು ಆಗುವುದಿಲ್ಲ. ಬಕಿಟ್‌ ಹಿಡಿಯಲು ಬರಬೇಡ,

ಶಿವಶಂಕರ: ಆಯ್ತಪ್ಪ, ಸರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net