ತೋಟದಲ್ಲಿ 2 ಸಾವಿರ ಅಡಿಕೆ ಮರಗಳಿವೆ. ಇವುಗಳಲ್ಲಿ 800 ಮರಗಳು ಲ ಕೊಡುತ್ತಿವೆ. 1750 ನೇಂದ್ರ ಬಾಳೆ, ಕಬ್ಬು, 25 ಮಾವಿನ ಮರಗಳು, ತೆಂಗು, 20 ಸಪೋಟಾ, 25 ಸೀಬೆ, ವಾಟರ್ ಆಪಲ್, ಹಲಸು, ಕರಿಬೇವು, ವಿಳ್ಯದ ಎಲೆ, ಸೀತಾಲ ಇನ್ನಿತರೆ ಹಣ್ಣಿನ ಗಿಡಗಳಿವೆ. ಇವುಗಳಿಗೆ ವರ್ಷಕ್ಕೆ ಒಂದು ಸಲ ದನದ ಗೊಬ್ಬರ ನೀಡುತ್ತಾರೆ. ಇದನ್ನು ಬಿಟ್ಟರೆ ತೋಟದಲ್ಲಿ ಬೆಳೆದಿರುವ ಕಳೆಯನ್ನು ಕಿತ್ತು ಮಣ್ಣಿನಲ್ಲಿ ಕೊಳೆಸಿ ಗೊಬ್ಬರವನ್ನಾಗಿ ನೀಡುತ್ತಿದ್ದಾರೆ. ಗಿಡ-ಮರಗಳಲ್ಲಿ ರೋಗ ಕಾಣಿಸಿಕೊಂಡರೆ ಹುಳಿ ಮಜ್ಜಿಗೆ ಮತ್ತು ಇತರೆ ಸಾವಯವ ದ್ರಾವಣವನ್ನು ತಯಾರಿಸಿ ಸಿಂಪಡಿಸುತ್ತಾರೆ. ಒಂದು ಬೋರ್‌ವೆಲ್ ಇದ್ದು ಇದರ ಮೂಲಕ ನೀರು ಸಂಗ್ರಹಣೆ ಮಾಡಲು ಸ್ವಂತ ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ. ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಮೂಲಕ ಜಲ ನೀಡುತ್ತಿದ್ದಾರೆ.