ಮಧ್ಯ ಪ್ರಾಚ್ಯದ ಯುದ್ದ, ಅಡುಗೆ ಅನಿಲ ಸಿಲಿಂಡರ್‌ ದುಬಾರಿ

ಅಡುಗೆ ಅನಿಲ ಸಿಲಿಂಡರ್‌
ಅಡುಗೆ ಅನಿಲ ಸಿಲಿಂಡರ್‌
Published on

ಚಿಕ್ಕಬಳ್ಳಾಪುರ: ಮಧ್ಯಪ್ರಾಚ್ಯದ (ಇರಾನ್‌ ಹಾಗೂ ಇಸ್ರೇಲ್‌, ಅಮೇರಿಕಾ ನಡುವೆ) ಯುದ್ದದ ಹಿನ್ನೆಲೆಯಲ್ಲಿ ಇಂಧನಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಕೃತಕ ಅಭಾವ ಸೃಷ್ಟಿ ಹಾಗೂ ಕಾಳಸಂತೆಯಲ್ಲಿ ಮಾರಾಟ ಪ್ರಮಾಣ ಹೆಚ್ಚಾಗಿದೆ.

ಹಿಂದೆ ಹೋಟೆಲ್‌,ರೆಸ್ಟೋರೆಂಟ್‌, ಕೆಫೆ, ಟೀ ಅಂಗಡಿ ಸೇರಿದಂತೆ ವಹಿವಾಟು ಕೇಂದ್ರಗಳಿಗೆ ವಾಣಿಜ್ಯ ಸಿಲಿಂಡರ್‌ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಪೂರೈಕೆದಾರರು ಹೆಚ್ಚುವರಿ ಹಣವನ್ನು ಪಡೆದೇಒದಗಿಸುತ್ತಿದ್ದರು. ಇದರ ಪ್ರಮಾಣವು ಈಗ ಯುದ್ದದಿಂದ ಹೆಚ್ಚಾಗಿದೆ. ಹೆಚ್ಚು ಹಣ ಪಾವತಿಸಿದವರಿಗೆಯಾವುದೇ ಸಮಸ್ಯೆ ಇಲ್ಲದೇ ಪೂರೈಸಲಾಗುತ್ತಿದೆ. ಬೇಡಿಕೆ ಸೃಷ್ಟಿಸಲು ಕೃತಕ ಅಭಾವಸೃಷ್ಟಿಸಲಾಗುತ್ತಿದೆ ಎಂಬುದಾಗಿ ಹೋಟೆಲ್‌ ಮಾಲೀಕರು ಆರೋಪಿಸಿದ್ದಾರೆ.

ಇನ್ನು ಗೃಹೋಪಯೋಗಿಸಿಲಿಂಡರ್‌ ಗಳು ಆನ್‌ ಲೈನ್‌ ನೋಂದಣಿಯ ಅವಧಿಯಂತೆ ಗ್ರಾಹಕರ ಮನೆಗಳಿಗೆ ಪೂರೈಕೆಯಾಗುತ್ತಿತ್ತು.ಈಗ ಕೇಂದ್ರ ಸರ್ಕಾರದ ಆದೇಶದಂತೆ ಒಂದು ಸಿಲಿಂಡರ್ ಪಡೆದುಕೊಂಡು ೨೧ ದಿನದ ಬಳಿಕ ಆನ್‌ ಲೈನ್‌ಮೂಲಕ ಬುಕ್‌ ಮಾಡಲು ಅವಕಾಶ ನೀಡುತ್ತಿದ್ದು ಇದರ ಬಗ್ಗೆ ಈಗಾಗಲೇ ಗ್ಯಾಸ್‌ ಏಜೆನ್ಸಿ ಮಾಲೀಕರುಗ್ರಾಹಕರಿಗೆ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net