ಸಚಿವ ಸಂಪುಟ ವಿಸ್ತರಣೆ ಗಲಾಟೆ, ಚಿಕ್ಕಬಳ್ಳಾಪುರದಲ್ಲೂ ಭುಗಿಲೆದ್ದ ಆಕ್ರೋಶ

ಬಾಗೇಪಲ್ಲಿಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬೆಂಬಲಿಗರು ಪ್ರತಿಭಟಿಸಿದರು.
ಬಾಗೇಪಲ್ಲಿಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬೆಂಬಲಿಗರು ಪ್ರತಿಭಟಿಸಿದರು.
Published on

ಚಿಕ್ಕಬಳ್ಳಾಪುರ:ನಿರೀಕ್ಷೆಯಂತೆ ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಯ ಕಾಂಗ್ರೆಸ್‌ನ ಯಾವುದೇ ಶಾಸಕರಿಗೆ ಸಚಿವಸ್ಥಾನ ಸಿಕ್ಕಿಲ್ಲ. ಇದು ಆಕಾಂಕ್ಷಿಗಳ ಜತೆಗೆ ಜಿಲ್ಲಾದ್ಯಂತ ಅಸಮಾಧಾನಕ್ಕೆಕಾರಣವಾಗಿದೆ.

ಬಾಗೇಪಲ್ಲಿ ಶಾಸಕಎಸ್.ಎನ್.ಸುಬ್ಬಾರೆಡ್ಡಿ, ಚಿಂತಾಮಣಿ ಶಾಸಕ ಡಾ ಎಂ.ಸಿ.ಸುಧಾಕರ್‌, ಚಿಕ್ಕಬಳ್ಳಾಪುರ ಶಾಸಕಪ್ರದೀಪ್‌ ಈಶ್ವರ್‌ ಅಯ್ಯರ್ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಪರಸ್ಪರ ಪೈಪೋಟಿಯಲ್ಲಿಕೆಪಿಸಿಸಿ ಹಂತದಿಂದ ಹಿಡಿದು ಎಐಸಿಸಿ ವರಿಷ್ಠರವರೆಗೂ ನಿರಂತರ ಒತ್ತಡ ಹೇರಿದ್ದು ಕೊನೆಕ್ಷಣದವರೆಗೂ ಮನ್ನಣೆ ಸಿಗುವ ಆಶಯವನ್ನೂ ಸಹ ವ್ಯಕ್ತಪಡಿಸಿದ್ದರು. ಆದರೆ, ಇವರ ನಿರೀಕ್ಷೆಯುಹುಸಿಯಾಗಿ, ನಿರಾಸೆ ಅನುಭವಿಸುವಂತಾಗಿದೆ. ಇನ್ನು ಅವಿಭಜಿತ ಕೋಲಾರ ಜಿಲ್ಲಾ ವ್ಯಾಪ್ತಿಯ ರಾಜಕೀಯಲೆಕ್ಕಾಚಾರದಲ್ಲಾದರೂ ಸ್ಥಳೀಯರಿಗೆ ಸೂಕ್ತ ಸ್ಥಾನಮಾನ ದೊರಕಿಲ್ಲ. ಇದು ವ್ಯಾಪಕ ಅಸಮಾಧಾನ,ಆಕ್ರೋಶಕ್ಕೆ ಕಾರಣವಾಗಿದೆ.

ಬಾಗೇಪಲ್ಲಿಯಲ್ಲಿ ಶಾಸಕಎಸ್‌.ಎನ್.ಸುಬ್ಬಾರೆಡ್ಡಿ ಬೆಂಬಲಿಗರು ಟಯರ್‌ ಸುಟ್ಟು ರಸ್ತೆ ತಡೆ ನಡೆಸಿದರು. ಧಿಕ್ಕಾರದಘೋಷಣೆಗಳನ್ನು ಕೂಗಿದರು. ಇನ್ನು ಆ.೫ ರಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಬಂದ್‌ ಗೆ ಕರೆನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net