ಯುಗಾದಿ ಹಬ್ಬದ ಸಂಭ್ರಮಾಚರಣೆ, ಖುಷಿಯಲ್ಲಿ ಮಿಂದ ಜನ

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮೈಗೆ ಅರಳೆಣ್ಣೆ ಹಚ್ಚಿಕೊಂಡಿರುವ ಜನರು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮೈಗೆ ಅರಳೆಣ್ಣೆ ಹಚ್ಚಿಕೊಂಡಿರುವ ಜನರು.
Published on

ಚಿಕ್ಕಬಳ್ಳಾಪುರ:ಪರಸ್ಪರ ಬೇವು ಬೆಲ್ಲ ಹಂಚಿಕೆ, ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ಗ್ರಾಮೀಣ ಕೀಡಾಚಟುವಟಿಕೆಯೊಂದಿಗೆ ಹೊಸ ವರ್ಷದ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವಿಧೆಡೆಹೊಸ್ತೊಡಕುವಿಗೆ ಬಾಡೂಟದ ಭೋಜನಕೂಟಗಳು ಭರ್ಜರಿಯಾಗಿ ನಡೆದವು.

ವಿಶೇಷ ದಿನದಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಗುಡ್ಡೆ ಮಾಂಸ ಖರೀದಿಗೆ ಪೈಪೋಟಿ ಕಂಡು ಬಂತು. ಹಲವರುಹಬ್ಬಕ್ಕಾಗಿ ಚೀಟಿಯನ್ನು ಕಟ್ಟಿ, ಆಹಾರ ಪದಾರ್ಥಗಳು, ಉಡುಗೋರೆಗಳನ್ನು ಪಡೆದುಕೊಂಡರು. ಇನ್ನುಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಗ್ರಾಹಕರು ಮುಗಿ ಬಿದ್ದ ಹಿನ್ನೆಲೆಯಲ್ಲಿ ದರದಪ್ರಮಾಣವು ದುಬಾರಿಯಾಗಿತ್ತು. ಹೊಸ್ತೊಡಕುವಿಗೆ ಕೆ.ಜಿ.ಕುರಿ ಮಾಂಸ ದರವು ೯೫೦, ಮೇಕೆ ಮಾಂಸವು೧೧೦೦ ರೂ, ನಾಟಿ ಕೋಳಿ ಮಾಂಸವು ೬೫೦ ರೂ, ಫಾರಂ ಕೋಳಿ ಮಾಂಸವು ೨೩೦ ರೂ ಇತ್ತು. ಹೊಸ ವರ್ಷ ಸಂಭ್ರಮದಹಿನ್ನೆಲೆಯಲ್ಲಿ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಹೊಸಬಟ್ಟೆಯನ್ನು ಧರಿಸಿ ಬಂದು ದೇವರ ದರ್ಶನ ಪಡೆದರು. ಬೇವು ಬೆಲ್ಲವನ್ನು ತಿನ್ನುವ ಮೂಲಕ ಬಾಳಿನಲ್ಲಿಸಿಹಿ ಕಹಿಯನ್ನು ಎದುರಿಸುವ ಸಂದೇಶವನ್ನು ಸಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net