ಎರಡು ಬೈಕ್​ ಬೆಂಕಿಗಾಹುತಿ

ಚಿಂತಾಮಣಿ ಜಿಲ್ಲಾ ಗ್ರಂಥಾಲಯದ ಆವರಣದಲ್ಲಿ ನಿಲ್ಲಿಸಿದ್ದ ಬೈಕ್​ಗಳು ಸುಟ್ಟ ಕರಕಲಾಗಿರುವುದು.
ಚಿಂತಾಮಣಿ ಜಿಲ್ಲಾ ಗ್ರಂಥಾಲಯದ ಆವರಣದಲ್ಲಿ ನಿಲ್ಲಿಸಿದ್ದ ಬೈಕ್​ಗಳು ಸುಟ್ಟ ಕರಕಲಾಗಿರುವುದು.
Published on

ಚಿಂತಾಮಣಿ: ಜಿಲ್ಲಾ ಗ್ರಂಥಾಲಯ ಆವರಣದಲ್ಲಿ ಗುರುವಾರ ಬೆಳಗ್ಗೆ ನಿಲ್ಲಿಸಿದ್ದ ಬೈಕ್​ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿವೆ.

ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಇತರ ಊರುಗಳಿಗೆ ಉದ್ಯೋಗಗಳಿಗೆ ತೆರಳುವ ಉದ್ಯೋಗಿಗಳು ದ್ವಿಚಕ್ರ ವಾಹನಗಳನ್ನು ಗ್ರಂಥಾಲಯದ ಆವರಣದಲ್ಲಿ ನಿಲ್ಲಿಸುತ್ತಿದ್ದರು. ದ್ವಿಚಕ್ರ ವಾಹನವೊಂದರಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ಪಕ್ಕದಲ್ಲಿದ್ದ ಮತ್ತೊಂದು ವಾಹನಕ್ಕೂ ತಗುಲಿದೆ. ಅಲ್ಲಿದ್ದ ದಿನಪತ್ರಿಕೆ ವಿತರಕರು ಕೂಡಲೇ ಇತರ ವಾಹನಗಳನ್ನು ಬೇರೆಡೆಗೆ ಸ್ಥಳಾಂತರಿಸಿದರು. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಬೈಕ್​ಗಳು ಸುಟ್ಟಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net