ಗೌರಿಬಿದನೂರು: ಅಬಕಾರಿ ಪೊಲೀಸರು ತಾಲೂಕಿನ ದೊಡ್ಡಕುರುಗೋಡು, ಹಾಲಗಾನಹಳ್ಳಿ ಗ್ರಾಮಗಳಲ್ಲಿ ದಾಳಿ ನಡೆಸಿ ಅಕ್ರಮವಾಗಿ ಆಂಧ್ರಪ್ರದೇಶದಿಂದ ಸಾಗಿಸುತ್ತಿದ್ದ 22 ಲೀ. ಸೇಂದಿ ವಶಪಡಿಸಿಕೊಂಡಿದ್ದಾರೆ. ಯಲಹಂಕ ಜಕ್ಕೂರು ಬಡಾವಣೆಯ ಮುನಿಯಪ್ಪ(57), ಮಂಚೇನಹಳ್ಳಿ ತಾಲೂಕು ಅರಸಾಲಾಬಂಡೆ ಗ್ರಾಮದ ವೆಂಕಟೇಶ್(45) ಬಂಧಿತರು. 2 ಬೈಕ್ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಸಿ.ಎನ್.ಕುಮಾರ್, ಜೈರಾಮ್ ಎಸ್.ರಾಠೋಡ್, ಪೇದೆಗಳಾದ ಅಜಿತ್ ಕೆ.ಬೆಂಡವಾಡೆ, ಎಚ್.ರವಿಪ್ರಸಾದ್ ಇದ್ದರು.