ಚಿಂತಾಮಣಿ: ನಗರದ ನಿವಾಸಿ, ಬೀಡಾ ಅಂಗಡಿ ನಡೆಸುತ್ತಿದ್ದ ಯುವರಾಜ್ (25) ಸಾಲಗಾರರ ಕಾಟಕ್ಕೆ ಬೇಸತ್ತು ಗುರುವಾರ ರಾತ್ರಿ ಗೋಪಸಂದ್ರದ ಮನೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಶ್ರೀನಿವಾಸ್ ಅವರ ಅನಾರೋಗ್ಯದ ಕಾರಣ ಯುವರಾಜ್ 2 ತಿಂಗಳ ಹಿಂದೆ ಬೆಂಗಳೂರಿನಿಂದ ಕೆಲಸ ಬಿಟ್ಟು, ಕೋಲಾರ ಕ್ರಾಸ್ಬಳಿ ಬೀಡಾ ಅಂಗಡಿ ಮಾಡಿಕೊಂಡಿದ್ದ. ಪರಿಚಯಸ್ಥರಿಂದ 10 ಲಕ್ಷ ರೂ. ಸಾಲ ಪಡೆದಿದ್ದ ಜತೆಗೆ ಮೀಟರ್ ಬಡ್ಡಿಗೂ ಸಾಲ ಪಡೆದಿದ್ದ. ಸಾಲಕೊಟ್ಟವರು ಇತ್ತೀಚೆಗೆ ಹಣ ಮರಳಿಸುವಂತೆ ಒತ್ತಾಯಿಸಿದ್ದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶ್ರೀನಿವಾಸ್ ನೀಡಿದ ದೂರಿನ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.