ಗಲಾಟೆಯಲ್ಲಿ ಮೂವರಿಗೆ ಗಾಯ

Three injured in clash
Three injured in clash
Published on
ಚಿಂತಾಮಣಿ: ಯಸಗಲಹಳ್ಳಿಯಲ್ಲಿ ಹಸು ತೊಳೆದ ನೀರು ಚರಂಡಿಗೆ ಹೋಗುವ ವಿಚಾರವಾಗಿ ನೆರೆ&ಹೊರೆಯ ಮನೆಗಳ ನಡುವೆ ನಡೆದ ಗಲಾಟೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಗ್ರಾಮದ ಸುಧಾ (43) ಹಾಗೂ ಅವರ ಪತಿ ವೆಂಕಟರವಣಪ್ಪ (49),ಲಕ್ಷ್ಮೀದೇವಮ್ಮ (41) ಗಾಯಾಳುಗಳು. ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಕಟರವಣಪ್ಪ ಹಾಗೂ ಲ್ಮದೇವಮ್ಮ ಕುಟುಂಬದ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಸಂಧಾನದ ಮೂಲಕ ಪರಸ್ಪರ ಸಮಾಧಾನಪಡಿಸಲಾಗಿತ್ತು. ಆದರೆ ಹಸು ತೊಳೆದ ನೀರು ಹರಿಯುವ ವಿಚಾರವಾಗಿ ಗಲಾಟೆ ನಡೆದಿದೆ. ಪರಸ್ಪರ ಹಲ್ಲೆಯಿಂದ ಮೂವರು ಗಾಯಗೊಂಡಿದ್ದಾರೆ. ಬಟ್ಲಹಳ್ಳಿ ಪೊಲೀಸ್​ ಠಾಣೆಗೆ ದೂರು, ಪ್ರತಿ ದೂರು ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net