ಖಾಸಗಿ ಹೂಡಿಕೆ ಕಂಪನಿಯಿಂದ ಸಾವಿರಾರು ಮಂದಿಗೆ ವಂಚನೆ | Thousands defrauded by a private investment company

ಪಟ್ಟಣದ ರಾಮಪಟ್ಟಣ ರಸ್ತೆಯಲ್ಲಿರುವ ಜನತಾ ಇಂಡಿಯಾ ವೆಂಚರ್ಸ್​ಮಾಲೀಕ ಫರೂಕ್​ ಪಾಷ ಸಾವಿರಾರುಗ್ರಾಹಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ಈಗ ಪರಾರಿ ಆಗಿದ್ದಾನೆ ಎಂದು ಆರೋಪಿಸಿ ಹೂಡಿಕೆ ಮಾಡಿರುವವರು ಗುರುವಾರ ಸಂಜೆ ಕಚೇರಿಗೆ ನುಗ್ಗಿ ಗಲಾಟೆ ಮಾಡಿದರು.
ಗುಡಿಬಂಡೆಯ  ರಾಮಪಟ್ಟಣ ರಸ್ತೆಯಲ್ಲಿರುವ ಜನತಾ ಇಂಡಿಯಾ ವೆಂಚರ್ಸ್​ಕಚೇರಿ ಮುಂದೆ ಹಣ ಹೂಡಿಕೆ ಮಾಡಿರುವ ಗ್ರಾಹಕರು ಪೊಲೀಸರೊಂದಿಗೆ ಚರ್ಚಿಸಿದರು
ಗುಡಿಬಂಡೆಯ ರಾಮಪಟ್ಟಣ ರಸ್ತೆಯಲ್ಲಿರುವ ಜನತಾ ಇಂಡಿಯಾ ವೆಂಚರ್ಸ್​ಕಚೇರಿ ಮುಂದೆ ಹಣ ಹೂಡಿಕೆ ಮಾಡಿರುವ ಗ್ರಾಹಕರು ಪೊಲೀಸರೊಂದಿಗೆ ಚರ್ಚಿಸಿದರು
Published on: 
  • ಹೂಡಿಕೆ ಮಾಡಿದ ಎಲ್ಲರಿಗೂ ಮಂಕುಬೂದಿ ಎರಚಿದ ಮಾಲೀಕ

  • ಗಲಾಟೆ ಮಾಡಿದ ಹೂಡಿಕೆದಾರರ ಮೇಲೆ ಲಾಠಿ ಚಾರ್ಜ್​

ಗುಡಿಬಂಡೆ :ಪಟ್ಟಣದ ರಾಮಪಟ್ಟಣ ರಸ್ತೆಯಲ್ಲಿರುವ ಜನತಾ ಇಂಡಿಯಾ ವೆಂಚರ್ಸ್​ಮಾಲೀಕ ಫರೂಕ್​ ಪಾಷ ಸಾವಿರಾರುಗ್ರಾಹಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ಈಗ ಪರಾರಿ ಆಗಿದ್ದಾನೆ ಎಂದು ಆರೋಪಿಸಿ ಹೂಡಿಕೆ ಮಾಡಿರುವವರು ಗುರುವಾರ ಸಂಜೆ ಕಚೇರಿಗೆ ನುಗ್ಗಿ ಗಲಾಟೆ ಮಾಡಿದರು.

ತುಮಕೂರು ಮೂಲದ ಫಾರೂಕ್​ ಪಾಷ ಎಂಬಾತ ಕಚೇರಿ ತೆರೆದು ಕೆಲ ಏಜೆಂಟರನ್ನು ನೇಮಕ ಮಾಡಿಕೊಂಡು ಪ್ರತಿ ತಿಂಗಳು ಒಂದು ಸಾವಿರ ಕಟ್ಟಿದರೆ ನಿಮಗೆ ಕಾರು, ಮನೆ, ದ್ವಿಚಕ್ರ ವಾಹನಗಳು, ಚಿನ್ನದ ಉಂಗುರ ಹಾಗೂ ಪೀಠೋಪಕರಣಗಳನ್ನು ನೀಡುತ್ತೇವೆ. ಪ್ರತಿ ತಿಂಗಳು ಒಬ್ಬರಿಗೆ ಲಾಟರಿ ಮೂಲಕ ಆಯ್ಕೆ ಮಾಡುತ್ತೇವೆ. ಲಾಟರಿ ಮೂಲಕ ಆಯ್ಕೆಯಾದವರಿಗೆ ಸ್ಥಳದಲ್ಲೇವಸ್ತುಗಳನ್ನು ನೀಡುತ್ತೇವೆಂದು ಹೇಳಿ ಸರಿಸುಮಾರು 13,500 ಗ್ರಾಹಕರಿಂದ ಹಣಹೂಡಿಕೆ ಮಾಡಿಸಿಕೊಂಡಿದ್ದಾನೆ. ಮೊದಲ ಕೆಲ ತಿಂಗಳುಗಳು ಉತ್ತಮವಾಗಿ ನಡೆಸಿಕೊಂಡು ಬಂದಿದ್ದು, ಸೀಸನ್​&1, ಸೀಸನ್​ &2 ಎಂದು ಹೇಳಿ ಹಲವು ಸ್ಕೀಂಗಳನ್ನು ಪ್ರಾರಂಭಿಸಿದ್ದಾನೆ. ಆದರೆ, ಇತ್ತೀಚೆಗೆ ಲಾಟರಿ ಮೂಲಕ ಆಯ್ಕೆಯಾದವರಿಗೆ ವಸ್ತುಗಳನ್ನು ನೀಡದ ಕಾರಣ ಅನುಮಾನಗೊಂಡ ಗ್ರಾಹಕರು ಗುರುವಾರ ಸಂಜೆ ಕಚೇರಿಗೆ ವಿಚಾರಿಸಲು ಹೋದರೆ ಕಚೇರಿಯಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ. ಇದನ್ನು ಗಮನಿಸಿದ ಗ್ರಾಹಕರು, ಕಚೇರಿ ಮುಂದೆ ಮಾಲೀಕರು ಬಂದು ನಮ್ಮ ಹಣ ವಾಪಸ್​ ನೀಡಬೇಕು ಎಂದು ಬೇಡಿಕೆ ಇಡುತ್ತಿದ್ದಂತೆ ಹೂಡಿಕೆ ಮಾಡಿದ್ದ ಎಲ್ಲರೂ ಸೇರಿ ಗಲಾಟೆ ಮಾಡಲು ಶುರು ಮಾಡಿದರು. ಮಾಹಿತಿ ತಿಳಿದ ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾಠಿ ಚಾರ್ಜ್​ ಮಾಡಿ ಗಲಾಟೆಯನ್ನು ಹತೋಟಿಗೆ ತಂದರು.

ಈ ಹಿಂದೆ ಪಾಷ ಶಿರಾ ಮತ್ತು ತುಮಕೂರು ತಾಲೂಕಿನಲ್ಲೂಇದೇ ರೀತಿ ಹಣ ಕಟ್ಟಿಸಿಕೊಂಡು ಮೋಸ ಮಾಡಿದ್ದು, ಅಲ್ಲಿನ ಗ್ರಾಹಕರು ಸಹ ಗುಡಿಬಂಡೆ ಕಚೇರಿಗೆ ಬಂದು ಆಕ್ರೋಶ ಹೊರಹಾಕಿದರು.

ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಲಾಟರಿ ನಡೆಸುತ್ತಿದ್ದ ಮಾಲೀಕರ ಪರವಾನಗಿಯನ್ನು ಸ್ಥಳಿಯ ಪೊಲೀಸರು ಏಕೆ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳಿಯರು ಪ್ರಶ್ನಿಸುತ್ತಿದ್ದಾರೆ.

.