ತೋಟದಲ್ಲಿನ ಟನ್ ಗಟ್ಟಲೇ ದ್ರಾಕ್ಷಿ ಕದ್ದ ಕಳ್ಳರು, ರೈತ ಕಣ್ಣೀರು

ದ್ರಾಕ್ಷಿ ಬೆಳೆ
ದ್ರಾಕ್ಷಿ ಬೆಳೆ
Published on

ಚಿಕ್ಕಬಳ್ಳಾಪುರ: ತೋಟದಲ್ಲಿ ಸಮೃದ್ಧಿಯಾಗಿ ಬೆಳೆದಿದ್ದ ದ್ರಾಕ್ಷಿ ಇಳುವರಿಯನ್ನು ರಾತ್ರೋರಾತ್ರಿ ಕಳ್ಳರು ಕಳ್ಳತನ ಮಾಡಿದ್ದಾರೆ.

ಹೌದು!ಇಂತಹುದೊಂದು ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೊಳವನಹಳ್ಳಿಯಲ್ಲಿ ನಡೆದಿದೆ. ಬರೋಬ್ಬರಿ ೩ ಟನ್‌ ದ್ರಾಕ್ಷಿಕಳವಾಗಿರುವುದರ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯ ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳುಭೇಟಿ ನೀಡಿ, ಪರಿಶೀಲಿಸಿದ್ದು ತನಿಖೆ ಕೈಗೊಂಡಿದ್ದಾರೆ.

ಗ್ರಾಮದರೈತ ಬಸವರಾಜ್‌ ತೋಟದಲ್ಲಿ ರೆಡ್‌ ಗ್ಲೋಬ್‌ ದ್ರಾಕ್ಷಿಯನ್ನು ಬೆಳೆದಿದ್ದರು. ಇದು ಒಳ್ಳೆಯ ಫಸಲು ನೀಡಿದೆ.ಈ ಉತ್ತಮ ಇಳುವರಿಯನ್ನು ವ್ಯಾಪಾರಸ್ಥರು ಖರೀದಿಸಿದ್ದರು. ಇದರ ನಡುವೆ ಬೆಳಿಗ್ಗೆ ಬಂದು ನೋಡಿದಾಗ ಯಾರೋಕಳ್ಳರು ಕಟಾವು ಮಾಡಿರುವುದು ತಿಳಿದು ಬಂದಿದೆ. ತೋಟದಲ್ಲಿನ ದ್ರಾಕ್ಷಿಯನ್ನು ಕತ್ತರಿಸಿ, ದೂರದಲ್ಲಿನಿಲ್ಲಿಸಿದ ವಾಹನಕ್ಕೆ ಸಾಗಿಸಲಾಗಿದೆ. ೩ ಲಕ್ಷ ರೂ ಮೌಲ್ಯ ಹೆಚ್ಚಿನ ಮೌಲ್ಯದ ದ್ರಾಕ್ಷಿಯನ್ನು ಕಳ್ಳತನಮಾಡಲಾಗಿದೆ ಎಂದು ದೂರಿನಲ್ಲಿ ರೈತ ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆ ಟೊಮ್ಯಾಟೋ, ದಾಳಿಂಬೆಗೆ ಮಾರುಕಟ್ಟೆಯಲ್ಲಿ ಬಂಪರ್‌ಬೆಲೆ ನಿಗದಿಯಾಗಿದ್ದಾಗ ರೈತರ ತೋಟದಲ್ಲಿ ಕಳ್ಳರು ಕೈ ಚಳಕ ತೋರಿಸಿದ ಪ್ರಕರಣಗಳು ವರದಿಯಾಗಿದ್ದವು.ಇದರ ನಡುವೆ ಇದೀಗ ದ್ರಾಕ್ಷಿಯನ್ನು ಖದೀಮರು ಕದ್ದು ಪರಾರಿಯಾಗಿರುವಂತಹುದು ಚರ್ಚೆಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net