ಚಿನ್ನಾಭರಣ, ನಗದು ದೋಚಿದ್ದ ಖದೀಮ ಸೆರೆ

ಚಿನ್ನಾಭರಣ, ನಗದು ಕಳವು ಮಾಡಿದ್ದ ಖದೀಮನನ್ನು ಶಿಡ್ಲಟ್ಟ ಪೊಲೀಸರು ಬಂಧಿಸಿದ್ದಾರೆ. ಆರಕ್ಷಕ ವೃತ್ತ ನಿರೀಕ್ಷಕ ಜಿ.ಎನ್​.ಅನಂದಕುಮಾರ್​, ನಗರಠಾಣೆ ಪಿಎಸ್​ಐ ವೇಣುಗೋಪಾಲ್​, ಸಿಬ್ಬಂದಿ ಇದ್ದರು.
ಚಿನ್ನಾಭರಣ, ನಗದು ಕಳವು ಮಾಡಿದ್ದ ಖದೀಮನನ್ನು ಶಿಡ್ಲಟ್ಟ ಪೊಲೀಸರು ಬಂಧಿಸಿದ್ದಾರೆ. ಆರಕ್ಷಕ ವೃತ್ತ ನಿರೀಕ್ಷಕ ಜಿ.ಎನ್​.ಅನಂದಕುಮಾರ್​, ನಗರಠಾಣೆ ಪಿಎಸ್​ಐ ವೇಣುಗೋಪಾಲ್​, ಸಿಬ್ಬಂದಿ ಇದ್ದರು.
Published on
ಶಿಡ್ಲಟ್ಟ: ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಆಂಧ್ರ ಮೂಲದ ಕಳ್ಳನನ್ನು ನಗರ ಪೊಲೀಸರು ಬಂಧಿಸಿದ್ದಾರೆ. 24 ಗ್ರಾಂ ಚಿನ್ನದ ಆಭರಣ ಹಾಗೂ 400 ಗ್ರಾಂ ಬೆಳ್ಳಿ ವಸ್ತು ವಶಕ್ಕೆ ಪಡೆದಿದ್ದಾರೆ.
ಆಂಧ್ರದ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ನಿವಾಸಿ ಜಿ.ರಾಮಕೃಷ್ಣ (60) ಬಂಧಿತ. ಪ್ರಕರಣದ ಹಿನ್ನೆಲೆ: ಶಿಡ್ಲಟ್ಟ ನಗರದ ಚಿಂತಾಮಣಿ ಬೈಪಾಸ್​ ರಸ್ತೆಯ ನಿವಾಸಿ, ಹೋಟೆಲ್​ ಉದ್ಯಮಿ ಶ್ರೀನಾಥ್​ ಅವರ ಮನೆಯಲ್ಲಿ ಜು.22ರಂದು ಬೀರುವಿನಲ್ಲಿದ್ದ ಚಿನ್ನ&ಬೆಳ್ಳಿ ಆಭರಣ ಹಾಗೂ ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದರು. ಈ ಕುರಿತು ಶಿಡ್ಲಟ್ಟ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತಂಡ ರಚಿಸಿ ಒಂದೇ ವಾರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ರಾಮಕೃಷ್ಣ ವಿರುದ್ಧ ಕರ್ನಾಟಕದ ವಿವಿಧ ಠಾಣೆಗಳಲ್ಲಿ 11 ಕಳವು ಪ್ರಕರಣಗಳು ದಾಖಲಾಗಿವೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net