ವಿಧಾನಸೌಧದಲ್ಲಿ ಯಾವ್ಯಾವೋ ಕೆಟ್ಟ ಧ್ವನಿಗಳು ಇವೆ, ಮಾರ್ಯದೆಯೂ ಇಲ್ಲ

ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್‌, ಭಗತ್‌ ಸಿಂಗ್‌ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಸಂದೀಪ್‌ ಬಿ.ರೆಡ್ಡಿ ಮತ್ತಿತರರು ಇದ್ದರು.
ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್‌, ಭಗತ್‌ ಸಿಂಗ್‌ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಸಂದೀಪ್‌ ಬಿ.ರೆಡ್ಡಿ ಮತ್ತಿತರರು ಇದ್ದರು.
Published on

ಚಿಕ್ಕಬಳ್ಳಾಪುರ: ವಿಧಾನಸೌಧದಲ್ಲಿ ಯಾವ್ಯಾವೋ ಕೆಟ್ಟು ಧ್ವನಿಗಳು ಇವೆ. ನಾಯಿ, ಕೋತಿಗಳು ಎನ್ನುವಂತಹುದೆಲ್ಲವನ್ನೂ ಕೇಳಬೇಕಾಗಿದೆ. ಕ್ಷೇತ್ರದ ಮಾನ ಮರ್ಯಾದೆ ಹರಾಜಿಗಿಡುವಂತಹ ಮಾರಕ ಜನರಿಗೆ ಜನರು ಎಂದಿಗೂ ಮತ ಹಾಕಿ, ಗೆಲ್ಲಿಸಬೇಡಿ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್‌ ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಹೇಗೆ ಮಾತನಾಡಬೇಕೆಂಬುದೇ ಗೊತ್ತಿಲ್ಲದ ನಾಯಕರು ಸಹ ಇದ್ದಾರೆ. ಹುಚ್ಚುತನದಿಂದ ಶಾಸಕ ಶಿವಲಿಂಗೇಗೌಡ ಮನಸ್ಸಿಗೆ ಬಂದಂತೆ ನಾಲಿಗೆ ಹಿಡಿತ ಬಿಟ್ಟು ನಾಯಿ, ಕೋತಿಗಳು ಸೇರಿದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಯಾರೇ ಆಗಲಿ ಹೆಣ್ಣು ಮಕ್ಕಳನ್ನು ಅವಮಾನಿಸಬಾರದು. ಇದಕ್ಕೆ ಅಧಿವೇಶನದಲ್ಲಿ ಆತನಿಗೆ ಸರಿಯಾಗಿ ಉತ್ತರ ಕೊಡಲಾಗಿದೆ. ಆದರೆ, ಮುಜುಗರ ಮಾತುಗಳನ್ನು ಇಲ್ಲಿ ಹೇಳಲು ಹೋಗಲು ಆಗುವುದಿಲ್ಲ ಎಂದು ಕಿಡಿಕಾರಿ ದರು.

ಪ್ರಧಾನಿ ನರೇಂದ್ರ ಮೋದಿ ಮೌನದಲ್ಲಿಯೇ ಕೆಲಸ ಮಾಡುವ ಸಮರ್ಥ ನಾಯಕ. ಮೊದಲು ಅಮೇರಿಕಾ ಹೆಚ್ಚಿನ ಸುಂಕ ವಿಧಿಸಿ ಪೆಟ್ಟು ಕೊಡಲು ಮುಂದಾಗಿತ್ತು. ಇದರ ನಡುವೆ ಯುರೋಪ್‌ ದೇಶಗಳ ಒಕ್ಕೂಟದೊಂದಿಗೆ ಭಾರತ ಒಪ್ಪಂದ ಮಾಡಿಕೊಂಡ ತಕ್ಷಣವೇ ಡೊನಾಲ್ಡ್‌ ಟ್ರಂಪ್‌ ಮೋದಿಗೆ ಕರೆ ಮಾಡಿದ್ದು ತೆರಿಗೆ ಇಳಿಸಿದ್ದಲ್ಲದೇ ಎರಡು ದೇಶಗಳ ನಡುವಿನ ವಹಿವಾಟಿಗೂ ಅನುಮೋದನೆ ನೀಡಿದರು. ಇದು ನಮ್ಮ ಆಡಳಿತಗಾರನಿಗೆ ಇರುವ ತಾಕತ್ತು. ಇನ್ನೊಬ್ಬರಿದ್ದರೆ (ಕೇಂದ್ರ ವಿಪಕ್ಷದ ನಾಯಕ ರಾಹುಲ್‌ ಗಾಂಧಿ) ಕೇವಲ ಪುಸ್ತಕ ತೋರಿಸಿ, ಹೋರಾಟ ನಡೆಸುತ್ತಲೇ ನಗೆಪಾಟಲಿಗೀಡಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net