ಇದೇ ವೇಳೆ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್ಅನ್ನು ತೆಗೆದುಕೊಂಡು ಹೋಗಿದ್ದರು. ಈ ಖದೀಮರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದು ಸಮೀಪದ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ. ಇದರಲ್ಲಿ ಮಧ್ಯರಾತ್ರಿ ಅಂಗಡಿಗೆ ಪ್ರವೇಶಿಸಿದ ಕಳ್ಳರು, ಮೂರು ಗಂಟೆಗೂ ಹೆಚ್ಚು ಕಾಲ ಅಂಗಡಿಯಲ್ಲಿ ಉಳಿದು ದರೋಡೆ ನಡೆಸಿದ್ದಾರೆ. ಮೊದಲು ರಾಡ್ ಬಳಸಿ ಬೀಗ ಒಡೆಯಲು ಯತ್ನಿಸಿದ್ದು ಬಳಿಕ ಕಟರ್‌ನಿಂದ ಬೀಗ ಕತ್ತರಿಸಿ ಒಳ ಪ್ರವೇಶಿಸಿದ್ದಾರೆ. ಮೂರು ಬ್ಯಾಗ್‌ಗಳಲ್ಲಿ ಬೆಳ್ಳಿ ವಸ್ತುಗಳನ್ನು ತುಂಬಿಕೊಂಡು ಪರಾರಿಯಾಗಿದ್ದು ಇದಕ್ಕೆ 4 ಗಂಟೆ ಅವಧಿ ತೆಗೆದುಕೊಂಡಿದ್ದಾರೆ.