ಪಶು ಆಹಾರದಲ್ಲಿ ಗುಣಮಟ್ಟವಿಲ್ಲ

ಕಲ್ಲೂಡಿ ಡೇರಿಯಲ್ಲಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸರಬರಾಜು ಮಾಡುವ ಪಶು ಆಹಾರದಲ್ಲಿ ಗುಣಮಟ್ಟವಿಲ್ಲ ಎಂದು ಆರೋಪಿಸಿ ಹಾಲು ಉತ್ಪಾದಕ ರೈತರು ಪ್ರತಿಭಟಿಸಿದರು.
The quality of cattle feed is poor.
ಕಲ್ಲೂಡಿ ಡೇರಿಯಲ್ಲಿ ರೈತರ ಸಮ್ಮುಖದಲ್ಲೇ 50 ಮೂಟೆ ಪಶು ಆಹಾರವನ್ನು ಗೌರಿಬಿದನೂರು ತಾಲೂಕು ವ್ಯವಸ್ಥಾಪಕ ಡಾ.ನರೇಂದ್ರ ಬೂದಿಹಾಳ್​ ಪರಿಶೀಲಿಸಿದರು.The quality of cattle feed is poor.
Published on: 
  • ಕಲ್ಲೂಡಿ ಡೇರಿಯಲ್ಲಿ ಹಾಲು ಉತ್ಪಾದಕ ರೈತರಿಂದ ಪ್ರತಿಭಟನೆ

ಗೌರಿಬಿದನೂರು:ಕಲ್ಲೂಡಿ ಡೇರಿಯಲ್ಲಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸರಬರಾಜು ಮಾಡುವ ಪಶು ಆಹಾರದಲ್ಲಿ ಗುಣಮಟ್ಟವಿಲ್ಲ ಎಂದು ಆರೋಪಿಸಿ ಹಾಲು ಉತ್ಪಾದಕ ರೈತರು ಪ್ರತಿಭಟಿಸಿದರು.

50 ಕೆಜಿ ಪಶು ಆಹಾರದ ಚೀಲದಲ್ಲಿ ಕರಗದ ಕಲ್ಲಿನ ಪುಡಿ, ಮಣ್ಣಿನ ಮಾದರಿಯ ಪದಾರ್ಥ ಪತ್ತೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಆಹಾರ ನೀರಿನಲ್ಲಿ ಹಾಕಿದರೆ ಕರಗದೇ ಎಂ-ಸ್ಯಾಂಡ್​ ಮಿಶ್ರಣ ಮಾಡಿದಂತೆ ಕಾಣುತ್ತಿದೆ. ಇದನ್ನೇ ಪಶುಗಳಿಗೆ ನೀಡುತ್ತಿದ್ದು, ಅವುಗಳ ಆರೋಗ್ಯ ಏನಾಗಬೇಕು? ಗುಣಮಟ್ಟದ ಆಹಾರ ಸರಬರಾಜು ಮಾಡುತ್ತಾರೆಂಬ ವಿಶ್ವಾಸದಿಂದ ಪಶು ಆಹಾರ ಖರೀದಿಸಿ, ಒಕ್ಕೂಟಕ್ಕೆ ಹಾಲು ಹಾಕುತ್ತಿದ್ದೇವೆ ಎಂದು ರೈತರು ಅಳಲು ತೋಡಿಕೊಂಡರು.

ಕಲ್ಲೂಡಿ ಡೇರಿ ಕಾರ್ಯದರ್ಶಿಗಳು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಗೌರಿಬಿದನೂರು ತಾಲೂಕು ವ್ಯವಸ್ಥಾಪಕ ಡಾ.ನರೇಂದ್ರ ಬೂದಿಹಾಳ್​ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಡಾ.ಬೂದಿಹಾಳ್​ ರೈತರ ಅಹವಾಲು ಆಲಿಸಿದರು. ರೈತರ ಸಮ್ಮುಖದಲ್ಲೇ ಪ್ರಾತ್ಯಕ್ಷಿಕವಾಗಿ 50 ಮೂಟೆ ಪಶು ಆಹಾರವನ್ನು ಪರೀಕ್ಷೆಗೆ ಒಳಪಡಿಸಿದಾಗ, ಒಕ್ಕೂಟದ ಪಶು ಆಹಾರದಲ್ಲಿದ್ದ ಕಲ್ಲಿನ ಪುಡಿ ಪದಾರ್ಥ ನೀರಿನಲ್ಲಿ ಕರಗಿತು.

ಪಶು ಆಹಾರ ತಯಾರಿಕೆಯಲ್ಲಿ ಅಕ್ಕಿ ತೌಡು, ಜೋಳ, ನವಣೆಯಂತಹ ಪೌಷ್ಟಿಕ ಆಹಾರ ಪದಾರ್ಥ ಬಳಸಲಾಗುತ್ತದೆ. ಕೋಟ್ಯಂತರ ರೂ.ವೆಚ್ಚದ ಅತ್ಯಾಧುನಿಕ ಮಿಷನರಿಗಳು ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೂ ದೂರು ಬಂದಿಲ್ಲ. ರೈತರು ಆದಷ್ಟು ಒಣ ಮೇವನ್ನು ಪಶುಗಳಿಗೆ ನೀಡಬೇಕು, ಇದರಿಂದ ಹಾಲಿನ ಉತ್ಪಾದನೆಯೂ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು. ಹಾಲು ಉತ್ಪಾದಕ ರಾಮಕೃಷ್ಣ, ನಾಗರಾಜ್​, ಲೋಕೇಶ್​, ಪ್ರಸನ್ನಕುಮರ್​, ಶಿವಕುಮಾರ್​, ಯರ್ರಪ್ಪ, ಮಲ್ಲಪ್ಪ, ಗಂಗಮ್ಮ, ಮಹೇಶ್​, ಸುಹಾಸ್​, ನರಸೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net