ಡಿ ಪಾಳ್ಯ ಜನರ ನೆಮ್ಮದಿ ಕಸಿದ ನೊಣಗಳ ಕಾಟ

ಡಿ ಪಾಳ್ಯ ಗ್ರಾಮದಲ್ಲಿ ನೊಣಗಳ ಹಾವಳಿ.
ಡಿ ಪಾಳ್ಯ ಗ್ರಾಮದಲ್ಲಿ ನೊಣಗಳ ಹಾವಳಿ.
Published on

ಪ್ರಮುಖ ಮುಖ್ಯಾಂಶಗಳು

  • ಕೋಳಿ ಫಾಮ್​ರ್ಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳದೆ ಸಮಸ್ಯೆ
  • ಪರಿಹಾರಕ್ಕೆ ಕ್ರಮವಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ
  • ಸಾರ್ವಜನಿಕರು ಹೈರಾಣಾಗಿದ್ದಾರೆ.
ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ತಾಲೂಕಿನ ಡಿ ಪಾಳ್ಯ ಗ್ರಾಮದಲ್ಲಿ ಕೋಳಿ ಫಾಮ್​ರ್ಗಳಿಂದ ಎದುರಾಗಿರುವ ನೊಣಗಳ ಕಾಟಕ್ಕೆ ಸಾರ್ವಜನಿಕರು ಹೈರಾಣಾಗಿದ್ದಾರೆ.
ನೊಣಗಳನ್ನು ನಿಯಂತ್ರಿಸಲು ಗ್ರಾಮ ಪಂಚಾಯಿತಿಗೆ ಪ್ರತಿ ದಿನ ದೂರು ಅರ್ಜಿ ಹರಿದು ಬರುತ್ತಿವೆ. ಗ್ರಾಪಂನಿಂದ ಗ್ರಾಮದಲ್ಲಿ ಔಷಧ ಸಿಂಪಡಿಸಿದರೂ ನೊಣಗಳ ಕಾಟ ಕಡಿಮೆಯಾಗಿಲ್ಲ. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರೂ ನೊಣಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ
ಎಂದು ಆರೋಪಿಸುತ್ತಿದ್ದಾರೆ.
ಗ್ರಾಪಂ ಅಧ್ಯಕ್ಷ ಗಂಗರಾಜು ಮಾತನಾಡಿ, 1 ತಿಂಗಳಿಂದ ಗ್ರಾಮದಲ್ಲಿ ನೊಣಗಳ ಕಾಟ ಜಾಸ್ತಿಯಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೋಳಿ ಫಾಮ್​ರ್ಗಳಿಂದ ಬರುವ ನೊಣಗಳು ಮನೆಯಲ್ಲಿ ಊಟದ ಮೇಲೆ ಕುಳಿತುಕೊಳ್ಳುತ್ತಿವೆ, ಜಾನುವಾರುಗಳಿಗೆ ನೊಣಗಳಿಂದ ಗಾಯಗಳಾಗಿ ರಕ್ತ ಸೋರುತ್ತಿದೆ. ಕೋಳಿ ಫಾಮ್​ರ್ಗಳ ಮಾಲೀಕರು ಸ್ವಚ್ಛತೆ ಕಾಪಾಡದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ಇನ್ನಾದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ್ದಿದರೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಪಂ ಉಪಾಧ್ಯಕ್ಷ ರಂಗನಾಥ ಗೌಡ ಮಾತನಾಡಿ, ಡಿ ಪಾಳ್ಯ, ವದ್ದೆನಹಳ್ಳಿ ಬಳಿ ಕೆಲವು ಫಾಮ್​ರ್ಗಳಿಂದ ನೊಣಗಳು ಬರುತ್ತಿವೆ. ಪಕ್ಕದ ಹುದುಗೂರು ಗ್ರಾಪಂ ವ್ಯಾಪ್ತಿಯ ಕೋಳಿ ಫಾಮ್​ರ್ಗಳಿಂದಲೂ ನೊಣಗಳು ಬರುತ್ತಿವೆ. ಈ ಬಗ್ಗೆ ಅಲ್ಲಿನ ಪಿಡಿಒ, ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಆದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.
ಸದಸ್ಯ ನರಸಿಂಹ ಮೂರ್ತಿ ಮಾತನಾಡಿ, ಶೆಟ್ಟಿ ಕುಂಟೆ ಭಾಗದಲ್ಲಿರುವ ಫಾಮ್​ರ್ನಿಂದ ನೊಣಗಳು ಹಿಂಡು ಹಿಂಡಾಗಿ ಬರುತ್ತಿವೆ, ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ತಾಪಂ, ತಾಲೂಕು ಆರೋಗ್ಯ ಅಧಿಕಾರಿಗಳು ನೊಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net