ಒಣ ಮೆಣಸಿನ ಕಾಯಿ ಮೂಟೆಗಳ ಜತೆಗೆ ಕಳ್ಳತನದ ದ್ವಿಚಕ್ರ ವಾಹನಗಳ ವಶ

ಬಂಧಿತ ಬೈಕ್‌ ಕಳ್ಳರ ಜತೆ ಪೊಲೀಸರು
ಬಂಧಿತ ಬೈಕ್‌ ಕಳ್ಳರ ಜತೆ ಪೊಲೀಸರು
Published on

ಚಿಕ್ಕಬಳ್ಳಾಪುರ: ವಿವಿಧೆಡೆದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ೧೦ ಬೈಕುಗಳನ್ನುವಶಪಡಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಆಟೋನಗರದ ಚೆಲ್ಲ ಸೋಮಶಂಕರ್‌(೨೨) ಹಾಗೂ ಗೌರಿಬಿದನೂರು ತಾಲೂಕಿನ ವೇದಲವೇಣಿಯ ವಿನೋದ್‌ ಕುಮಾರ್‌ (೨೩) ಬಂಧಿತರು.ಗೌರಿಬಿದನೂರು ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಗುಂಡಾಪುರ ಕಡೆಯಿಂದ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಇದೇ ವೇಳೆದಾಖಲೆಯನ್ನು ಪರಿಶೀಲಿಸಲಾಗಿ ಬೈಕನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿತ್ತು. ಇದರಲ್ಲಿಭಾಗಿಯಾಗಿದ್ದ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ ೧೦ ಲಕ್ಷ ರೂಮೌಲ್ಯದ ೧೦ ದ್ವಿಚಕ್ರ ವಾಹನಗಳ ಜತೆಗೆ ಬ್ಯಾಗಿನಲ್ಲಿದ್ದ ೬೭ ಸಾವಿರ ರೂ ಮೌಲ್ಯದ ೪೨೦ ಕೆ.ಜಿ. ಒಣಮೆಣಸಿನ ಕಾಯನ್ನು ವಶಪಡಿಸಿಕೊಳ್ಳಲಾಗಿದೆ.

ಚೆಲ್ಲ ಸೋಮಶಂಕರ್‌ ಪ್ರತಿಷ್ಠಿತ ಖಾಸಗೀ ಕಂಪನಿಯಲ್ಲಿ ಸ್ಕ್ಯಾನರ್‌ಬಾಯ್‌ ಆಗಿದ್ದರೆ, ವಿನೋದ್‌ ಕುಮಾರ್‌ ಗಾರೆ ಕೆಲಸಗಾರ. ಈ ಇಬ್ಬರನ್ನು ಬಂಧಿಸಿ, ಗೌರಿಬಿದನೂರುನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net