

ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚಸ್ಸನ್ನು ಹಾಳು ಮಾಡಿದವರು ಯಾರು? ಅವರ 50 ವರ್ಷದ ರಾಜಕಾರಣಕ್ಕೆ ಕಳಂಕ ತರಲು ಯತ್ನಿಸಿದವರನ್ನು ಮೊದಲು ಹಿಡಿಯಬೇಕು. ಇದನ್ನು ಬಿಟ್ಟು ಪ್ರಕರಣದಲ್ಲಿ ಬೇರೆಯವರನ್ನು ಬಲಿಪಶುಗಳನ್ನಾಗಿಸಲು ಹೊರಟಿರುವುದು ಸರಿಯಲ್ಲ ಎಂದು ಸಂಸದ ಡಾ ಕೆ.ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿನ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವ ಪ್ರಿಯಾಂಕ ಖರ್ಗೆ ಲ್ಯಾಜಿಕ್ ಇಲ್ಲದೇ ಮ್ಯಾಜಿಕ್ ಮಾಡುವ ವರ್ತನೆ ತೋರುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡಿದವರನ್ನು ಬಿಟ್ಟು ಬೇರೆಯವರನ್ನು ಬಲಿಪಶು ಮಾಡುವುದು ಸರೀನಾ? ಪ್ರಶ್ನಿಸಿದ್ದಾರೆ.
ಒಂದು ಸೂಕ್ಷ್ಮ ವಿಚಾರದಲ್ಲಿ ಸುಮ್ಮನೆ ರಾಜಕಾರಣ ಮಾಡಬೇಡಿ, ನಿಮ್ಮ ಆಡಳಿತ ಇನ್ನು ಒಂದು ವರ್ಷ ಮಾತ್ರ ಇರುತ್ತದೆ. ಹಾಗೆಯೇ ಪಾಪದ ಕೊಡ ತುಂಬುತ್ತಿದೆ. ಇದಕ್ಕೆ ಮುಂಬರುವ ದಿನಗಳಲ್ಲಿ ತಕ್ಕ ಫಲವನ್ನು ಅನುಭವಿಸುತ್ತೀರಿ, ನಿಮಗೆ ಹೆಂಗೆ ಬೇಕೋ ಹಂಗೆ ತನಿಖೆ ಮಾಡುವುದಾ?. ಮಾತಿಗೆ ಅಂಬೇಡ್ಕರ್ ಬಗ್ಗೆ ಮಾತನಾಡಲಾಗುತ್ತದೆ. ಆದರೆ, ಸಂವಿಧಾನದ ಕಾನೂನು ನಿಯಮಗಳನ್ನು ಪಾಲಿಸುವುದು ಹೀಗೇನಾ?. ನೀವು ಏನೇನೂ ಮಾಡುವುದಕ್ಕೆ, ಏನೇನು ಹೇಳುವುದನ್ನು ಒಪ್ಪಿಕೊಳ್ಳುವುದಕ್ಕೆ ಜನರೇನು ಮುಟ್ಟಾಳರಾ? ಮೂರ್ಖರು ಎಂಬುದಾಗಿ ಭಾವಿಸಿದ್ದಿರೇನೋ? ಎಂದು ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೂ ಸ್ಟಿಂಗ್ ಆಪರೇಷನ್ ಗೂ ಯಾವುದೇ ಸಂಬಂಧವಿಲ್ಲ. ಅವರ ಇತಿಹಾಸದ ಬಗ್ಗೆ ಟೀಕಿಸುವವರಿಗೆ ಏನಾದರೂ ಗೊತ್ತಿದೆಯೇ?, ಅವರು ಹಿಂದೆ ಇಂತಹ ಆರೋಪಕ್ಕೆ ಗುರಿಯಾಗಿಲ್ಲ ಎಂದಿದ್ದಾರೆ,