ವಿಶ್ವನಾಥ್–ಗವಾಸ್ಕರ್' ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರೀಡಾ ಮಾರ್ಗದರ್ಶನ

ಕ್ರೀಡಾಪಟುಗಳಿಗೆ ಸುನೀಲ್ ಗವಾಸ್ಕರ್ ಕ್ರೀಡಾಕಿಟ್ ವಿತರಿಸಿದರು.
ಕ್ರೀಡಾಪಟುಗಳಿಗೆ ಸುನೀಲ್ ಗವಾಸ್ಕರ್ ಕ್ರೀಡಾಕಿಟ್ ವಿತರಿಸಿದರು.
Published on

ಚಿಕ್ಕಬಳ್ಳಾಪುರ: ಭವಿಷ್ಯದ ಕ್ರಿಕೆಟ್ ಆಟಗಾರರಿಗೆ ಪ್ರೋತ್ಸಾಹಿಸುವ ಉದ್ದೇಶದ ಹಿನ್ನೆಲೆಯಲ್ಲಿ ತಾಲೂಕಿನ ಮುದ್ದೇನಹಳ್ಳಿಯಲ್ಲಿರುವ ಸಾಯಿ ಕೃಷ್ಣನ್ ಕ್ರೀಡಾಂಗಣದಲ್ಲಿ 'ವಿಶ್ವನಾಥ್–ಗವಾಸ್ಕರ್' ಕ್ರಿಕೆಟ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಕ್ರೀಡಾ ಕಿಟ್‌ಗಳನ್ನು ವಿತರಿಸಲಾಯಿತು. ಪ್ರತಿಭಾವಂತ ಕ್ರೀಡಾಪಟುಗಳಾಗಲು ಮಾರ್ಗದರ್ಶನ ನೀಡಲಾಯಿತು.
ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಮಿಷನ್ ನಿರ್ವಹಿಸುತ್ತಿರುವ ಅಕಾಡೆಮಿಯು
2025ರಲ್ಲಿ ಆರಂಭವಾಗಿದ್ದು ಇದರಲ್ಲಿ ಸಂಪೂರ್ಣ ಉಚಿತವಾಗಿ ಕ್ರಿಕೆಟ್ ತರಬೇತಿ ನೀಡಲಾಗುತ್ತಿದೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಮೈದಾನ ಹಾಗೂ ಉತ್ತಮ ಅಭ್ಯಾಸ ಸೌಲಭ್ಯಗಳನ್ನು ಒದಗಿಸಲಾಗಿದೆ. ಖ್ಯಾತ ಮಾರ್ಗದರ್ಶಕರಿಂದ ನಿಯಮಿತ ತರಬೇತಿ ನೀಡಲಾಗುತ್ತಿದೆ. ಈ ಶಿಬಿರಾರ್ಥಿಗಳಿಗೆ ಕ್ರೀಡಾ ಕಿಟ್ ವಿತರಿಸಲಾಯಿತು.
ಇದೇ ವೇಳೆ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಬಿ.ಎನ್.ನರಸಿಂಹಮೂರ್ತಿ ಉಪಸ್ಥಿತರಿದ್ದರು.

*ಅಕಾಡೆಮಿ ಸ್ಥಾಪನೆ ದೀರ್ಘಕಾಲದ ಕನಸು’*
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗುಂಡಪ್ಪ ವಿಶ್ವನಾಥ್, ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವುದು ತನ್ನ ದೀರ್ಘಕಾಲದ ಕನಸಾಗಿತ್ತು ಎಂದು ಹೇಳಿದರು.
ಕಳೆದ ವರ್ಷ ಸದ್ಗುರು ಶ್ರೀ ಮಧುಸೂದನ್ ಸಾಯಿ ಭೇಟಿ ಮಾಡಿದ ಬಳಿಕ ಆ ಕನಸು ನನಸಾಯಿತು ಎಂದರು.
‘ಕ್ರಿಕೆಟ್ ಕೇವಲ ಆಟವಲ್ಲ; ಅದು ಜೀವನದ ಸವಾಲುಗಳನ್ನು ಸಮತೋಲನದಿಂದ ಎದುರಿಸಲು ಕಲಿಸುತ್ತದೆ’ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net