ತಾಯಿ ಆರೈಕೆಗೆ ಮಗನ ಅಸಡ್ಡೆ, ನೆರವಿಗೆ ಬಂದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ

ಶಿಡ್ಲಘಟ್ಟ ನಗರದ ರಸ್ತೆ
ಶಿಡ್ಲಘಟ್ಟ ನಗರದ ರಸ್ತೆ
Published on
ಚಿಕ್ಕಬಳ್ಳಾಪುರ: ಹೆತ್ತ ತಾಯಿ ಪಾಲನೆಗೆ ಅಸಡ್ಡೆ ತೋರಿದ ಮಗನಿಗೆ ಜೀವನೋಪಾಯಕ್ಕಾಗಿ ಪ್ರತಿ ತಿಂಗಳು ಆರ್ಥಿಕ ನೆರವು ನೀಡುವುದರ ಜತೆಗೆ ಸ್ವಾಧೀನಾನುಭವದಲ್ಲಿರುವ ಮನೆಯನ್ನು ಬಿಟ್ಟು ಕೊಡಲು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯವು ಆದೇಶಿಸಿದೆ.
ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿರುವ ವೆಂಕಟಲಕ್ಷ್ಮಮ್ಮ (೬೮) ಆಶ್ರಯ ಕಲ್ಪಿಸುವಲ್ಲಿ ಮಗ ಅಶೋಕ್ ಅಸಡ್ಡೆ ಧೋರಣೆ, ಅವಾಚ್ಯ ಶಬ್ದಗಳಿಂದ ನಿಂದನೆಯ ವಿರುದ್ಧ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದ ಮೆಟ್ಟಿಲೇರಿದ್ದರು. ದೂರಿನ ವಿಚಾರಣೆ ನಡೆಸಿದ ಎಸಿ ಡಿ.ಎಚ್‌.ಅಶ್ವಿನ್‌ ಸಂತ್ರಸ್ಥರಿಗೆ ನ್ಯಾಯ ಒದಗಿಸಿದ್ದಾರೆ.
ವಯೋಸಹಜ ಕಾಯಿಲೆಯಿಂದ ತೊಂದರೆ ಅನುಭವಿಸಲಾಗುತ್ತಿದೆ. ಯಾವುದೇ ಆಶ್ರಯವಿಲ್ಲದೇ ಒಬ್ಬಂಟಿ ಜೀವನ ನಡೆಸಬೇಕಾಗಿದೆ. ಮನೆಯನ್ನು ಹೆಸರಿಗೆ ಮಾಡಿಸಿಕೊಂಡ ಬಳಿಕ ಮಗ ಪಾಲನೆ ಮಾಡುತ್ತಿಲ್ಲ. ವೈದ್ಯಕೀಯ ಸೌಲಭ್ಯವನ್ನೂ ಕಲ್ಪಿಸುವಲ್ಲೂ ಕಡೆಗಣಿಸಲಾಗಿದೆ ಎಂದು ವೆಂಕಟಲಕ್ಷ್ಮಮ್ಮ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳು ಆರೋಪಿಗೆ ನೋಟಿಸ್‌ ನೀಡಿ, ವಿಚಾರಣೆ ಕೈಗೊಂಡರು.
ವೃದ್ಧೆಯ ಅಳಲನ್ನು ಆಲಿಸಿದ ನ್ಯಾಯಾಲಯವು ಆರೋಪಿ ಯಾವುದೇ ಆಕ್ಷೇಪಣೆ ಸಲ್ಲಿಸದ ಹಿನ್ನೆಲೆಯಲ್ಲಿ ಸಂತ್ರಸ್ಥೆಗೆ ನ್ಯಾಯ ಒದಗಿಸಿದೆ.
ಮಗನ ಹೆಸರಿನಲ್ಲಿದ್ದ ಆಸ್ತಿ ಖಾತೆಯನ್ನು ರದ್ದುಪಡಿಸುವುದು. ಸಂತ್ರಸ್ಥೆಯ ಹೆಸರಿಗೆ ವರ್ಗಾಯಿಸುವ ಮೂಲಕ ಮನೆಯನ್ನು ಸ್ವಾಧೀನಾನುಭವಕ್ಕೆ ನೀಡುವುದು. ಪ್ರತಿ ತಿಂಗಳು ವೃದ್ಧೆಗೆ ಪ್ರತಿ ತಿಂಗಳು ಜೀವನೋಪಾಯಕ್ಕಾಗಿ ೧೦ ಸಾವಿರ ರೂಗಳನ್ನು ಬ್ಯಾಂಕ್‌ ಖಾತೆಗೆ ಜಮಾಗೊಳಿಸುವುದು ಹಾಗೂ ವೃದ್ಧೆಯ ಆರೋಗ್ಯ ನಿರ್ವಹಣೆ ಜವಾಬ್ದಾರಿಯನ್ನು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನೀಡುವುದರ ಆದೇಶವನ್ನು ಉಪ ವಿಭಾಗಾಧಿಕಾರಿಗಳು ಹೊರಡಿಸಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net