ಮಧುಗಿರಿ: ಯುವಜನತೆ ದೇಶದ ಭವಿಷ್ಯ. ಯುವಕರಿಗೆ ಉತ್ತಮ ವಿದ್ಯೆ ನೀಡಿದಾಗ, ಸಮಾಜ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ ಕಾರ್ಯಕ್ರಮದ ಅಂಗವಾಗಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಯುವ ಜನತೆಗೆ ವಿದ್ಯೆ ನೀಡಿದರೆ ಅವರು ಸಮಾಜಕ್ಕೆ ಆಸ್ತಿಯಾಗುತ್ತಾರೆ. ಮಕ್ಕಳ ಶಿಕ್ಷಣಕ್ಕೆ ಏನೆಲ್ಲ ಬೇಕೋ ಅದೆಲ್ಲವನ್ನೂ ನೀಡಲು ನಾನು ಬದ್ಧ. ಈಗಾಗಲೇ ತಾಲೂಕಿನಲ್ಲಿ ಮಕ್ಕಳ ಶಿಣಕ್ಕೆ ಉಚಿತ ನೋಟ್ ಪುಸ್ತಕ ವಿತರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಂಗನವಾಡಿ ಮಕ್ಕಳಿಗೂ ಉಚಿತ ಸಮವಸ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಕಾಲೇಜು ಪ್ರಾರಂಭದ ವೇಳೆಗೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಅನ್ನಪ್ರಸಾದ ಯೋಜನೆಯೂ ಜಾರಿಗೆ ತರಲಾಗುವುದು. ಇದಕ್ಕೆ ಪ್ರಥಮ ದರ್ಜೆ ಕಾಲೇಜಿನ ಎಲ್ಲರೂ ಭಾಗಿಯಾಗಬೇಕು. ಇದೊಂದು ಪುಣ್ಯದ ಕೆಲಸ ಇದಕ್ಕೆ ಎಲ್ಲರ ಸಹಕಾರ ಅಗತ್ಯ. ನಮ್ಮ ಭಾಗವು ಬರಪೀಡಿತ ಪ್ರದೇಶವಾಗಿದ್ದು, ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿಸಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೀಡಲು ಉದ್ದೇಶಿಸಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆ, ಇಡೀ ಜಿಲ್ಲೆಗೆ ವಿಸ್ತರಿಸುವ ಚಿಂತನೆಯಿದೆ. ರುಚಿ ಮತ್ತು ಶುಚಿಗೆ ಆದ್ಯತೆ ನೀಡಬೇಕು, ಗ್ರಾಮೀಣ ಭಾಗದಲ್ಲಿ ಪ್ರಥಮ ಬಾರಿಗೆ ಈ ಯೋಜನೆ ಪ್ರಾರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯೋಜನೆ ವಿಸ್ತರಿಸಿ ಮಿಡಿಗೇಶಿ ಮತ್ತು ಬಡವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿಸ್ತರಿಸುವ ಉದ್ದೇಶವಿದೆ. ಈ ಯೋಜನೆಗೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪುರಸಭೆ ಮಾಜಿ ಅಧ್ಯರು ಒಳಗೊಂಡ ಸಮಿತಿಯ ರಚಿಸಲಾಗುವುದು ಎಂದರು.
ಪಾವಗಡ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದ ಮಹಾರಾಜ್ ಮಾತನಾಡಿ, ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಾಲ್ಕು ಸಾವಿರ ಮಂದಿಗೆ ಮಧ್ಯಾಹ್ನದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಇಂತಹ ಕಾರ್ಯ ಹಣವಂತರಿಂದ ಸಾಧ್ಯವಿಲ್ಲ ಗುಣವಂತರಿಂದ ಮಾತ್ರ ಸಾಧ್ಯ. ಮಧುಗಿರಿಯಲ್ಲಿ ಈ ಯೋಜನೆ ಪ್ರಾರಂಭಿಸಿ ವಿದ್ಯಾರ್ಥಿಗಳ ಜೀವನ ಜ್ಯೋತಿ ಹೆಚ್ಚಿಸುವ ಕೆಲಸವನ್ನು ಶಾಸಕ ಕೆ.ಎನ್.ರಾಜಣ್ಣ ಮತ್ತು ಎಂಎಲ್ಸಿ ರಾಜೇಂದ್ರ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡುತ್ತಿರುವ ಮೊಟ್ಟಮೊದಲ ವಿಶ್ವವಿದ್ಯಾನಿಲಯ ತುಮಕೂರು. ಈ ಯೋಜನೆ ಯಶಸ್ವಿಯಾದ ನಂತರ ಬೇರೆ ಜಿಲ್ಲೆಯ, ರಾಜ್ಯಗಳ ವಿವಿಗಳು ತುಮಕೂರಿಗೆ ಆಗಮಿಸಿ ಯೋಜನೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅದೇ ರೀತಿ ತುಮಕೂರು ಪಟ್ಟಣದ ವಿವಿಧ ಕಾಲೇಜುಗಳ ಮಧ್ಯಾಹ್ನದ ಊಟ ಯೋಜನೆಗೆ ಬೇಡಿಕೆ ಬರುತ್ತಿದೆ ಎಂದರು.
ಉಪಕುಲಪತಿ ವೆಂಕಟೇಶ್ವರಲು ಮಾತನಾಡಿ, ಮಹಾಯೋಜನೆಗಳು ಅನುಷ್ಠಾನಗೊಳಿಸಲು ಪ್ರತಿಯೊಬ್ಬರಲ್ಲೂ ಬದ್ಧತೆ, ಅವಶ್ಯಕತೆ ಪ್ರಾಮಾಣಿಕತೆ ಇರಬೇಕು. ಯೋಜನೆಯಿಂದ ವಿದ್ಯಾರ್ಥಿಗಳು ಸಂಸ್ಕಾರವಂತರಾಗುತ್ತಿದ್ದು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂಬಂಧ ಬೆಳೆಸಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ 10,000 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡುವ ಯೋಜನೆ ಇದೆ ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ, ಈ ಯೋಜನೆ ಪಾತೀತವಾಗಿದೆ, ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 750 ವಿದ್ಯಾರ್ಥಿಗಳಿಗೆ ಅಂದಾಜು 25 ಲ ರೂ. ವೆಚ್ಚದಲ್ಲಿ ಅನ್ನಪ್ರಸಾದ ವಿತರಣೆ ಪ್ರಾರಂಭಿಸಲಾಗುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯ ಜಿ.ಜೆ ರಾಜಣ್ಣ, ಪುರಸಭೆ ಮಾಜಿ ಅಧ್ಯರಾದ ಎಂ.ಕೆ.ನಂಜುಂಡಯ್ಯ, ಗಂಗಣ್ಣ, ಲಾಲಾಪೇಟೆ ಮಂಜುನಾಥ್, ಮುಖಂಡ ಹರ್ಷ ಕುರುಬರಹಳ್ಳಿ, ಅನ್ನಪೂರ್ಣೇಶ್ವರಿ ಸಮಿತಿಯ ಸದಸ್ಯರಾದ ಪರಶುರಾಂ, ಕರಿಯಣ್ಣ, ರಮೇಶ್ ಬಾಬು, ನಾಗರಾಜ ಶೆಟ್ರು, ಚಂದ್ರಶೇಖರ್, ಸುರೇಶ್ ಇದ್ದರು.