ಚಿಕ್ಕಬಳ್ಳಾಪುರ: ಪ್ರವಾಸಿತಾಣ ಸ್ಕಂದಗಿರಿಯಲ್ಲಿ ಟ್ರಕ್ಕಿಂಗ್ ಆಗಮಿಸಿದ್ದ ಪ್ರವಾಸಿಗನಿಗೆ ಹಾವು ಕಚ್ಚಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬೆಂಗಳೂರಿನ ದೇವೇಂದ್ರ (33) ಹಾವು ಕಡಿತಕ್ಕೊಳಗಾದವರು. ಗೆಳೆಯರೊಂದಿಗೆ ಭಾನುವಾರ ಟ್ರಕ್ಕಿಂಗ್ ಬಂದಿದ್ದು, ಮರದ ಕೊಂಬೆಯಲ್ಲಿದ್ದ ಹಾವು ಕಚ್ಚಿದೆ. ಅಸ್ವಸ್ಥಗೊಂಡಿದ್ದವನನ್ನು ಗೆಳೆಯರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ದೇವೇಂದ್ರ ಅಪಾಯದಿಂದ ಪಾರಾಗಿದ್ದಾನೆ. ಮುಂಜಾಗ್ರತಾ ಕ್ರಮವಾಗಿ 24 ಗಂಟೆ ನಿಗಾ ವಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿ ಗಿರೀಶ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.