ಬಾಗೇಪಲ್ಲಿ&ಚೇಳೂರು ಮಾರ್ಗದ 7.5 ಕಿಮೀ ಉದ್ದದ ರಾಜ್ಯ ಹೆದ್ದಾರಿ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ 19.70 ಕೋಟಿ ರೂ.ಅನುದಾನ ಬಿಡುಗಡೆಗೊಂಡಿದ್ದು, 2024ನೇ ಅಕ್ಟೋಬರ್ ತಿಂಗಳಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರಸ್ತೆ ಕಾಮಗಾರಿಗೆ ಪೂಜೆ ನೇರವೇರಿಸಿದ್ದಾರೆ. ಅದೇ ತಿಂಗಳ 10 ರಂದು ಬೆಂಗಳೂರು ಮೂಲದ ಖಾಸಗಿ ಸಂಸ್ಥೆ ಕಾಮಗಾರಿ ಪ್ರಾರಂಭಿಸಿದೆ. ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರನಿಗೆ ಲೋಕೋಪಯೋಗಿ ಇಲಾಖೆ 11 ತಿಂಗಳ ಗಡವು ನೀಡಿದ್ದು, 2025ರ ಸೆಪ್ಟೆಂಬರ್ 9ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು, ಆದರೆ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿಲ್ಲ.