ಕಣ್ಣೇದುರು ಅಂಗಡಿ ಭಸ್ಮ, ಆತಂಕದಲ್ಲಿ ಕುಸಿದು ಬಿದ್ದ ಮೃತಪಟ್ಟ ಮಾಲೀಕ!

ಮೃತ ಅಂಗಡಿ ಮಾಲೀಕ ವೆಂಕಟೇಶ್
ಮೃತ ಅಂಗಡಿ ಮಾಲೀಕ ವೆಂಕಟೇಶ್
Published on

ಚಿಕ್ಕಬಳ್ಳಾಪುರ: ನಗರದಲ್ಲಿನ ಪಶುಪಾಲನಾ ಹಾಗೂ ಪಶು ವೈದ್ಯ ಸೇವಾಇಲಾಖೆಯ ಮುಂಭಾಗದಲ್ಲಿನ ನಂದಿನಿ ಪಾರ್ಲರ್‌ ಬೂತ್‌ ಗೆ ಬೆಂಕಿ ಬಿದ್ದು ನಗದಿನ ಜತೆಗೆಉತ್ಪನ್ನಗಳು ಭಸ್ಮವಾಗಿದ್ದು ಇದರ ಅಘಾತದಲ್ಲಿ ಅಂಗಡಿ ಮಾಲೀಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಕಣಜೇನಹಳ್ಳಿಯ ವೆಂಕಟೇಶ್‌ (೪೯)ಮೃತರು. ಕಳೆದ ಹಲವು ವರ್ಷಗಳಿಂದ ಇಲ್ಲಿನ ನಂದಿನಿ ಪಾರ್ಲರ್‌ ಬೂತ್‌ ನಲ್ಲಿ ವಹಿವಾಟುನಡೆಸುತ್ತಿದ್ದರು. ಇದರ ನಡುವೆ ಸೋಮವಾರ ತಡರಾತ್ರಿ ಬೂತ್‌ ಗೆ ಬೆಂಕಿ ಬಿದ್ದು ಅಗ್ನಿಶಾಮಕ ದಳಸಿಬ್ಬಂದಿ ಬಂದು ನಂದಿಸುವಷ್ಟರಲ್ಲಿ ಹಾಲಿನ ಉತ್ಪನ್ನಗಳು, ಪೆಟ್ಟಿಗೆಯಲ್ಲಿನ ೧ ಲಕ್ಷ ರೂಭಸ್ಮವಾಗಿದೆ. ಇದರ ಬಗ್ಗೆ ಮಾಹಿತಿ ತಿಳಿದು ಬಂದ ಮಾಲೀಕರು ಸ್ಥಳದಲ್ಲಿ ಹೃದಯಾಘಾತದಿಂದಅಸ್ವಸ್ಥಗೊಂಡು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇಮೃತಪಟ್ಟಿದ್ದಾರೆ.

ನಂದಿನಿ ಪಾರ್ಲರ್‌ ಬೂತ್‌ ಅಂಗಡಿ ನಿರ್ವಹಣೆಗಾಗಿ ಸಾಲ ಸೋಲ ಮಾಡಿಬಂಡವಾಳ ಹೂಡಲಾಗಿತ್ತು. ಪ್ರತಿ ತಿಂಗಳು ಉತ್ಪನ್ನಗಳ ಖರೀದಿ, ಆರ್ಥಿಕ ಸಮಸ್ಯೆ, ಕೆಲಸದ ಒತ್ತಡದನಡುವೆಯೂ ನಿಭಾಯಿಸಲಾಗುತ್ತಿತ್ತು. ಇದರ ನಡುವೆ ಅಂಗಡಿಗೆ ಬೆಂಕಿ ಬಿದ್ದು ಎಲ್ಲವೂ ಸುಟ್ಟುಹೋಗಿರುವುದರಿಂದ ತಂದೆ ಅಘಾತಕ್ಕೊಳಗಾಗಿದ್ದು ಬಾಯಲ್ಲಿ ರಕ್ತ ಬಂದು ಅಸ್ವಸ್ಥಗೊಂಡರು. ಆಸ್ಪತ್ರೆಗೆದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕುಟುಂಬಕ್ಕೆ ಆಶ್ರಯವಾಗಿದ್ದಯಜಮಾನನ್ನು ಕಳೆದುಕೊಳ್ಳಲಾಗಿದೆ ಎಂದು ಮೃತನ ಮಗ ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net