

ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ಕೆಲವೇಗಂಟೆಗಳ ಅವಧಿಯಲ್ಲಿ ಸಂಬಂಧವನ್ನು ಮುರಿದುಕೊಂಡಿದ್ದ ಪ್ರೇಮಿಗಳು ಮತ್ತೆ ಪರಾರಿಯಾಗಿದ್ದು ಹಾಗೆಯೇಮದುವೆಯಾಗಿದ್ದಾರೆ. ನ್ಯಾಯಕ್ಕಾಗಿ ಮತ್ತೆ ಪೊಲೀಸರ ಮೊರೆ ಹೋಗಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ಬಡಾವಣೆಯಪೇಂಟರ್ ದೀಪುಹಾಗೂ ಇಲ್ಲಿನ ಕಂದವಾರಪೇಟೆಯ ೧೮ ವರ್ಷದ ಯುವತಿಯು ಪರಸ್ಪರ ಪ್ರೀತಿಸುತ್ತಿದ್ದರು. ಹುಡುಗ ಪರಿಶಿಷ್ಟ ಜಾತಿಹಾಗೂ ಹುಡುಗಿ ಬಲಿಜ ಜನಾಂಗಕ್ಕೆ ಸೇರಿದ್ದು ಅಂತರ್ಜಾತಿಯ ವಿವಾಹಕ್ಕೆ ಹುಡುಗಿಯ ಪಾಲಕರು ವಿರೋಧವ್ಯಕ್ತಪಡಿಸಿದ್ದರು.ಇದಕ್ಕೂ ಜಗ್ಗದೇ ಪ್ರೇಮಿಗಳು ಮದುವೆ ಮಾಡಿಕೊಂಡು ಬಂದಿದ್ದರು. ಇದರ ನಡುವೆ ಪೊಲೀಸ್ ಠಾಣೆಯಲ್ಲಿ ಕಳೆದಜನವರಿಯಲ್ಲಿ ವಿಚಾರಣೆ ಕೈಗೊಂಡಿದ್ದ ಸಂದರ್ಭದಲ್ಲಿ ಯುವತಿಯು ಪ್ರಿಯಕರಿನಿಗೆ ಕೈ ಕೊಟ್ಟಿದ್ದು ತಾಳಿ ಬಿಸಾಡಿ ಪಾಲಕರೊಂದಿಗೆ ತೆರಳಿದ್ದಳು. ಪ್ರಿಯಕರನ ವಿರುದ್ಧ ಪೋಕ್ಸೋ ಪ್ರಕರಣ,ಪ್ರಶಾಂತ್ ನಗರದಲ್ಲಿ ಮಹಿಳೆಯೊಬ್ಬರಿಗೆ ವಂಚಿಸಿದ್ದರ ಬಗ್ಗೆಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದನ್ನು ತಿಳಿದು ಆಕ್ರೋಶ ವ್ಯಕ್ತಪಡಿಸಿದ್ದಳು.
ಇನ್ನು ಕಳೆದ ಆರುತಿಂಗಳಿಂದಲೂ ಪಾಲಕರ ಮನೆಯಲ್ಲಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಬೇಸತ್ತ ಯುವತಿಯುಪ್ರಿಯಕರನನ್ನು ಕರೆದುಕೊಂಡು ಹೋಗಿ ಬೇರೆಡೆ ಮದುವೆಯಾಗಿದ್ದಾರೆ. ಗಂಡನ ಬಗ್ಗೆ ಹಿಂದೆ ಕೆಟ್ಟದಾಗಿ ಹೇಳಿದ ಹಿನ್ನೆಲೆಯಲ್ಲಿಬಿಟ್ಟು ಹೋಗಿದ್ದು ಇದೀಗ ಸತ್ಯಾಂಶ ಗೊತ್ತಾಗಿದೆ. ಗಂಡನ ಜತೆ ಇರುವುದಾಗಿ ಯುವತಿಯು ವಿಡಿಯೋಸಂದೇಶದಲ್ಲಿ ಹೇಳಿದ್ದಾರೆ. ಇತ್ತ ಕೆಲವರು ಪ್ರಾಣ ಬೆದರಿಕೆಯನ್ನೊಡ್ಡಿದ್ದು ರಕ್ಷಣ ನೀಡಬೇಕುಎಂದು ದೀಪು ಮನವಿ ಮಾಡಿದ್ದಾನೆ.