ಎಸ್ಸಿ ನಿಗಮದಿಂದ 16 ರೈತರಿಗೆ ಪರಿಕರ ವಿತರಣೆ

ಬಾಗೇಪಲ್ಲಿ ತಾಲೂಕು ಪಂಚಾಯಿತಿ ಆವರಣದಲ್ಲಿ ಗಂಗಾ ಕಲ್ಯಾಣ ಯೋಜನೆ ಲಾನುಭವಿಗಳಿಗೆ ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಸಲಕರಣೆ ವಿತರಿಸಿದರು.
ಬಾಗೇಪಲ್ಲಿ ತಾಲೂಕು ಪಂಚಾಯಿತಿ ಆವರಣದಲ್ಲಿ ಗಂಗಾ ಕಲ್ಯಾಣ ಯೋಜನೆ ಲಾನುಭವಿಗಳಿಗೆ ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಸಲಕರಣೆ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಸಿ ನಿಗಮದಿಂದ 16 ರೈತರಿಗೆ ಪರಿಕರ ವಿತರಣೆ
ಬಾಗೇಪಲ್ಲಿ: ರೈತರಿಗೆ ಕೊಡುವ ಸರ್ಕಾರಿ ಸೌಲಭ್ಯಗಳಲ್ಲಿ ದಲ್ಲಾಳಿಗಳು, ಮುಖಂಡರು ಪಾಲುದಾರರು ಆಗಬಾರದೆಂಬ ಉದ್ದೇಶಕ್ಕಾಗಿ ಕಾರ್ಯಕ್ರಮ ಆಯೋಜಿಸಿ ರೈತರಿಗೆ ನೇರವಾಗಿ ಸವಲತ್ತು ವಿತರಿಸುತ್ತಿದ್ದೇವೆ ಎಂದು ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಎಸ್ಸಿ ನಿಗಮದಿಂದ ಕೊಳವೆಬಾವಿ ಕೊರೆಯಿಸಿರುವ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್​, ಮೋಟಾರ್​, ಕೇಬಲ್​, ಪೈಪ್​ ವಿವಿಧ ಸಕಲರಣೆ ವಿತರಿಸಿ ಮಾತನಾಡಿ, ರೈತರಿಗೆ ನೀಡುವ ಯೋಜನೆಗಳಿಗೆ ಅಧಿಕಾರಿಗಳಾಗಲೀ ಅಥವಾ ದಲ್ಲಾಳಿಗಳಿಗಾಗಲೀ ಹಣ ಪಡೆದುಕೊಂಡ ಬಗ್ಗೆ ಮಾಹಿತಿ ನೀಡಿದರೆ ಮತ್ತೊಂದು ಕೊಳವೆಬಾವಿ ಉಚಿತವಾಗಿ ಕೊರೆಯಿಸಲು ನಾವು ಸಿದ್ಧರಿದ್ದೇವೆ. ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ರೈತರಿಗೂ ತಿಳಿಯಬೇಕಿದೆ. ಎಸ್ಸಿ ನಿಗಮದಿಂದ 16 ರೈತರಿಗೆ 4.25 ಲಕ್ಷ ರೂ. ವೆಚ್ಚ ಕರ್ಚು ಮಾಡಿ ಕೊಳವೆಬಾವಿ ಕೊರೆದು ಸಲಕರಣೆ ವಿತರಿಸುತ್ತಿದ್ದೇವೆ. ಮುಂದಿನ ಬುಧವಾರ ಎಸ್ಟಿ ಸಮುದಾಯದ 22
ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಿಸಲಿದ್ದೇವೆ ಎಂದರು.
ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಹೆಚ್ಚು ಅಂಕಗಳಿಸಿದ ಗೂಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಮೌನಿಕಳನ್ನು ಶಾಸಕರು ಸನ್ಮಾನಿಸಿದರು.ತಹಸೀಲ್ದಾರ್​ ಮನೀಷಾಪತ್ರಿ, ತಾಪಂ ಇಒ ರಮೇಶ್​, ಮುಖಂಡರಾದ ಎಸ್​.ಎಸ್​.ರಮೇಶ್​ಬಾಬು, ಎಲ್​.ವಿಷ್ಣುವರ್ಧನರೆಡ್ಡಿ, ಎ.ವಿ.ಪೂಜಪ್ಪ, ಬಿ.ವಿ.ವೆಂಕಟರಮಣ, ಬಾಲೇನಹಳ್ಳಿ ರಮೇಶ್​, ಗುಡಿಬಂಡೆ ನವೀನ್​, ಕೋಟಪ್ಪ, ಶ್ರೀನಿವಾಸನಾಯಕ್​, ಎಸ್​.ಎನ್​.ನರಸಿಂಹಪ್ಪ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net