ಸುಧಾರಣಾ ಕ್ರಮ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

ದ್ವಿತೀಯ ಪಿಯುಸಿ ಟಾಫರ್ ಗಳು
ದ್ವಿತೀಯ ಪಿಯುಸಿ ಟಾಫರ್ ಗಳು
Published on
ಚಿಕ್ಕಬಳ್ಳಾಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲಾವಾರು ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಶೇ.೯೦.೨೪ ರಷ್ಟು ಫಲಿತಾಂಶದೊಂದಿಗೆ ೯ ನೇ ಸ್ಥಾನ ಪಡೆದಿದ್ದು ಪ್ರಗತಿದಾಯಕ ಉತ್ತಮ ಸಾಧನೆಯು ಮೆಚ್ಚುಗೆಗೆ ಪಾತ್ರವಾಗಿದೆ.
ಕಳೆದ ೨೦೨೪-೨೦೨೫ ನೇ ಸಾಲಿನಲ್ಲಿ ಶೇ.೭೫.೮೦ ರಷ್ಟು ಫಲಿತಾಂಶದ ಮೂಲಕ ೧೧ ನೇ ಸ್ಥಾನದಲ್ಲಿತ್ತು. ಇನ್ನು ಹಿಂದಿನ ಸಾಧನೆಗಳಿಗೆ ಹೋಲಿಸಿದ್ದಲ್ಲಿ ಪ್ರತಿ ಶೈಕ್ಷಣಿಕ ಸಾಲಿನ ಪರೀಕ್ಷೆಯಲ್ಲಿ ಹಂತ ಹಂತವಾಗಿ ಉನ್ನತ ಹಂತಕ್ಕೆ ಜಿಗಿಯುತ್ತಿರುವುದು ಕಂಡು ಬಂದಿದೆ.
ಜಿಲ್ಲೆಯಲ್ಲಿ ಈ ಬಾರಿ 12,೮೧೬ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು ೧೦೯೭೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಫೆ.28 ರಿಂದ ಮಾ.17 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದು
ಉತ್ತಮ ಮಾರ್ಗದರ್ಶಿ ಉತ್ತೇಜನಕಾರಿ ಕ್ರಮಗಳಿಂದ ಜಿಲ್ಲೆಯು ಉತ್ತಮ ಫಲಿತಾಂಶ ಗಳಿಸಿರುವುದಕ್ಕೆ ಜಿಲ್ಲಾಡಳಿತ ಹಾಗೂ ಪಿಯು ಶಿಕ್ಷಣ ಇಲಾಖೆ ಸಂತಸ ವ್ಯಕ್ತಪಡಿಸಿದೆ.
ಕಳೆದ ಸಾಲಿಗಿಂತಲೂ ಉತ್ತಮ ಸಾಧನೆಯನ್ನು ತೋರಲಾಗಿದೆ. ಇದರಲ್ಲಿ ಆಡಳಿತ ಯಂತ್ರಾಂಗ, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪರಿಶ್ರಮವೇ ಪ್ರಮುಖ ಕಾರಣ. ಮುಂಬರುವ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿ ಕ್ರಮಗಳ ಮೂಲಕ ರಾಜ್ಯದಲ್ಲಿ ಜಿಲ್ಲಾವಾರು ಹೆಚ್ಚಿನ ರ್ಯಾಂಕ್‌ ಪಡೆಯಬೇಕೆಂಬ ಮಾತುಗಳನ್ನು ಹೇಳಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net