

ಗೌರಿಬಿದನೂರು:
ಜನಪ್ರತಿನಿಧಿಗಳು, ಸ್ಥಳಿಯರು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಗಳು ಕೂಡ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಅಭಿವೃದ್ಧಿ ಕಾಣಬಹುದು ಎಂಬುದಕ್ಕೆ ಹೊಸೂರಿನ ಕರ್ನಾಟಕ ಪಬ್ಲಿಕ್ ಶಾಲೆ ಉದಾಹರಣೆಯಾಗಿದೆ. ಹಲವೆಡೆ ದಾಖಲಾತಿ ಕುಸಿತದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದರೆ, ಈ ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ದಾಖಲಾತಿ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.
ಆರ್ಥಿಕ ಹೊರೆ ಇಲ್ಲ
15ರಂದು 4 ಕೊಠಡಿ ಉದ್ಘಾಟನೆ
ಗ್ರಾಮೀಣ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಡಾ.ನರಸಿಂಹಯ್ಯ ಅವರ ಆಶಯವಾಗಿತ್ತು. ಇದೀಗ ಅವರು ಓದಿದ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ನರಸಿಂಹಯ್ಯರ ಆಶಯವನ್ನು ಈಡೇರಿಸಲಾಗುತ್ತಿದೆ.
— > ಕೆ.ಎಚ್.ಪುಟ್ಟಸ್ವಾಮಿ ಗೌಡ ಶಾಸಕ
ನರಸಿಂಹಯ್ಯ ಓದಿದ ಹಾಗೂ ಶತಮಾನ ಕಂಡಿರುವ ಶಾಲೆಯನ್ನು ಮಾದರಿ ಶಾಲೆಯಾಗಿ ಅಭಿವೃದ್ಧಿಪಡಿಸಬೇಕೆಂಬ ಬಯಕೆಯಿತ್ತು. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಕೆಪಿಎಸ್ ಶಾಲೆಯಾಗಿ ಘೋಷಿಸಿದ್ದು, ಶಾಲೆ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ.
— > ಮುರಳಿ ಚಂದ್ರಶೇಖರ್, ಶಾಲೆ ಹಳೆಯ ವಿದ್ಯಾರ್ಥಿ
ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಯಲ್ಲಿ ಎಲ್ಲ ಸೌಲಭ್ಯಗಳು ಲಭ್ಯವಿರುವುದರಿಂದ ಮಕ್ಕಳನ್ನು ಇದೇ ಶಾಲೆಗೆ ಸೇರಿಸಲು ಪಾಲಕರು ಮುಂದಾಗಿದ್ದು, ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ.
— > ಅಶ್ವತ್ಥಪ್ಪ, ಪಾಲಕರು