ಕಳ್ಳತನ, ವಂಚನೆ, ಲಂಚ ಪಡೆದು ಜೈಲಿಗೆ ಹೋಗಿಲ್ಲ ಎಂದ ಧಮ್ಕಿ ರಾಜೀವ್ ಗೌಡ

ರಾಜೀವ್ ಗೌಡ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವುದು
ರಾಜೀವ್ ಗೌಡ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವುದು
Published on
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾರಿಗೆ ಬೆದರಿಕೆಯನ್ನೊಡ್ಡಿದ ಪ್ರಕರಣದಲ್ಲಿ ಪೊಲೀಸ್‌ ಬಂಧನಕ್ಕೊಳಗಾದ ಬಳಿಕ ಜಾಮೀನು ಪಡೆದು ಚಿಂತಾಮಣಿ ಜೈಲಿನಿಂದ ಬಿಡುಗಡೆಯಾದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಡ್ಲಘಟ್ಟದ ಜನರ ಪರವಾಗಿ ನ್ಯಾಯ, ಸತ್ಯವನ್ನು ಕೇಳಲಾಯಿತು. ಇದು ಬಿಟ್ಟರೆ ಬೇರೆ ಉದ್ದೇಶವಿರಲಿಲ್ಲ. ಕ್ಷಮೆಯಾಚನೆಯ ಬಳಿಕ ಸಹ ಸಣ್ಣ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಸುದ್ದಿಯನ್ನಾಗಿಸಲಾಯಿತು. ಇದರಲ್ಲಿ ರಾಜಕೀಯ ಷ್ಯಡಂತ್ರವಾಗಿರಬಹುದು. ಆದರೂ ಸತ್ಯಕ್ಕೆ, ನ್ಯಾಯಕ್ಕೆ ತಲೆ ಬಾಗುತ್ತೇನೆ. ತಪ್ಪಾಗಿದ್ದರೆ ಮತ್ತೊಮ್ಮೆ ಕ್ಷಮೆ ಕೋರುವೆ ಎಂದರು.
ಶಿಡ್ಲಘಟ್ಟ ಕರ್ಮಭೂಮಿ. ಇಲ್ಲಿ ಹೋರಾಟವು ನಿರಂತರವಾಗಿ ಮುಂದುವರೆಯಲಿದೆ. ಮೊದಲಿನಿಂದಲೂ ಕೈಗೊಳ್ಳುತ್ತಿರುವ ಜನಪರ ಕಾರ್ಯಕ್ರಮಗಳಿಗೆ ಒಳ್ಳೆಯ ಬೆಂಬಲ ಸಿಗುತ್ತಿದೆ. ಇದುವೇ ಆತ್ಮಸ್ಥೈರ್ಯ ಹೆಚ್ಚಿಸಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net