ನಕಲಿ ಆರ್‌ ಸಿ ಸಂಖ್ಯೆ ಅಚ್ಚು ಹಾಕಿದ ಖಾಸಗಿ ಬಸ್‌ ವಶ

ಚಿಂತಾಮಣಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯು ಬಸ್ ಅನ್ನು ವಶಪಡಿಸಿಕೊಂಡಿದೆ.
ಚಿಂತಾಮಣಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯು ಬಸ್ ಅನ್ನು ವಶಪಡಿಸಿಕೊಂಡಿದೆ.
Published on

ಚಿಕ್ಕಬಳ್ಳಾಪುರ: ವಾರಸುದಾರರಿಲ್ಲದ ಹಾಗೂ ನೋಂದಣಿ ಸಂಖ್ಯೆ ಇಲ್ಲದ ವಾಹನಕ್ಕೆ ಅನಧಿಕೃತವಾಗಿ ಆರ್‌ ಸಿ ಸಂಖ್ಯೆ ಅಚ್ಚು ಹಾಕಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದ್ದು ಚಿಂತಾಮಣಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯು ಬಸ್ ಅನ್ನು ವಶಪಡಿಸಿಕೊಂಡಿದೆ.

ಮೋಟಾರು ವಾಹನ ನಿರೀಕ್ಷಕ ವಿ..ದಾಸೇಗೌಡ ಚಿಂತಾಮಣಿ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅದರಂತೆ ಚಿಂತಾಮಣಿ-ಚೇಳೂರು ರಸ್ತೆಯ ರೈಲ್ವೆ ಬ್ರಿಡ್ಜ್ ಪಕ್ಕದಲ್ಲಿರುವ ಖಲಂದರ್ ವರ್ಕ್ಸ್ ಶಾಪ್ ಹತ್ತಿರ ಬಸ್ಗೆ ವಾಹನದ ಮೂಲ ಅಡಿಗಟ್ಟು ಸಂಖ್ಯೆಯನ್ನು ಆಳಿಸಿ, ಅನಧಿಕೃತವಾಗಿ ಹೊಸದಾಗಿ ಚರ್ಚಿಸಿ ಸಂಖ್ಯೆಯ ಮೂರು ಅಕ್ಷರವನ್ನು ಅಚ್ಚು ಹಾಕುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದರ ನಡುವೆ ಅಧಿಕಾರಿಗಳ ದಾಳಿಯ ಸುಳಿವು ಸಿಗುತ್ತಿದ್ದಂತೆ ಬಸ್ಸಿನ ಮಾಲೀಕ ಮತ್ತು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ವರ್ಕ್ ಶಾಪ್ ಮಾಲೀಕ ಖಲಂದರ್ನನ್ನು ವಿಚಾರಣೆಗೊಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net