ಒಳ್ಳೆಯ ಪುಸ್ತಕದ ಓದು ಹಲವು ದೇಶಗಳನ್ನು ಸುತ್ತಿದ ಅನುಭವ ನೀಡುತ್ತದೆ. ಇದಕ್ಕೆ ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಡಾ.ಎಪಿಜೆ ಅಬ್ದುಲ್ ಕಲಾಂ, ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಎಚ್.ನರಸಿಂಹಯ್ಯರಂತಹ ಮಹನೀಯರ ಬದುಕು ಎಲ್ಲರಿಗೂ ಶಾಶ್ವತ ಸ್ಪೂರ್ತಿ. ಬಡತನ, ಕಷ್ಟಗಳು ಮತ್ತು ಸವಾಲುಗಳು ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಅವರು ಸಾಧಕ ಜೀವನದಿಂದಲೇ ಸಾಬೀತುಪಡಿಸಿದ್ದಾರೆ. ಇದರ ಯಶಸ್ಸಿನ ಹಿಂದಿರುವ ಕಠಿಣ ಪರಿಶ್ರಮವನ್ನು ಅರಿತುಕೊಳ್ಳಬೇಕು. ಬೇರುಗಳನ್ನು ಗಟ್ಟಿಗೊಳಿಸಿಕೊಂಡು ನಂತರ ಆಕಾಶದೆತ್ತರಕ್ಕೆ ಬೆಳೆಯುವ ಬಿದಿರಿನಂತೆ ವಿದ್ಯಾರ್ಥಿಗಳು ತಾಳ್ಮೆ, ಶಿಸ್ತು ಮತ್ತು ನಿರಂತರ ಪರಿಶ್ರಮದಿಂದ ಉನ್ನತ ಸಾಧನೆ ತೋರಬೇಕು. ಹದಿಹರೆಯದ ಕಾಲ ಟ್ಟದಲ್ಲಿ ಮಾದಕ ವಸ್ತುಗಳು, ಕೆಟ್ಟ ಅಭ್ಯಾಸಗಳು ಹಾಗೂ ದಾರಿತಪ್ಪಿಸುವ ಚಟುವಟಿಕೆಯಿಂದ ದೂರವಿರಬೇಕು ಎಂದರು.