ಸಮೃದ್ಧಿ ಮಳೆಗಾಗಿ ಪ್ರಾರ್ಥನೆ, ಕೆರೆಯಂಗಳದಲ್ಲಿ ಮುಸ್ಲಿಮರಿಂದ ನಮಾಜ್‌

ಕೆರೆಯಂಗಳದಲ್ಲಿ ಸಾಮೂಹಿಕ ಪ್ರಾರ್ಥನೆ
ಕೆರೆಯಂಗಳದಲ್ಲಿ ಸಾಮೂಹಿಕ ಪ್ರಾರ್ಥನೆ
Published on

ಚೇಳೂರು: ಮಳೆಯ ಅಭಾವದಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿಬರದಿಂದ ಪಾರಾಗಲು ಪ್ರಾರ್ಥಿಸಿ ಚೇಳೂರಿನ ತಾಲೂಕಿನ ನಾರೇಮದ್ದೆಪಲ್ಲಿಯಲ್ಲಿ ಮುಸ್ಲಿಮರುಕೆರೆಯಂಗಳದ ಮಣ್ಣಿನಲ್ಲಿ ಕುಳಿತು ಸಾಮೂಹಿಕ ನಮಾಜ್ಮಾಡಿದ್ದಾರೆ.

ಮಳೆಯ ಕೊರತೆಯಿಂದರೈತರು ಸೇರಿದಂತೆಸಾರ್ವಜನಿಕರು ಸಂಕಷ್ಟಅನುಭವಿಸುತ್ತಿದ್ದು, ಉತ್ತಮಮಳೆಯಾಗಿ ಫಸಲುಬರಲಿ ಎಂದುಪ್ರಾರ್ಥಿಸಿ, ವಿಶೇಷನಮಾಜ್ಮಾಡಿದರು.

ಉತ್ತಮ ಮಳೆಯಾಗಿಕೆರೆ-ಕಟ್ಟೆಗಳುನೀರಿನಿಂದ ತುಂಬಲಿ, ರೈತರು ಸಮೃದ್ಧಿಯಾಗಿಬೆಳೆ ಬೆಳೆಯಲಿ,ಜನಜೀವನ ಸುಧಾರಿಸಲಿಹಾಗೂ ಎಲ್ಲೆಡೆಸುಖ-ಶಾಂತಿನೆಲೆಸಲಿ ಎಂದುಪ್ರಾರ್ಥಿಸಿದರು.

ಮಳೆಗಾಲ ಆರಂಭವಾಗಿಎರಡು ತಿಂಗಳುಮುಗಿಯುತ್ತಿದ್ದರೂ ಉತ್ತಮಮಳೆಯಾಗಿಲ್ಲ. ಇದರಿಂದ ಜಲಮೂಲಗಳು ಬತ್ತಿಹೋಗಿವೆ. ಜಾನುವಾರುಗಳಿಗೆ ನೀರು,ಮೇವು ದೊರಕುತ್ತಿಲ್ಲ.ರೈತರು ಸಂಕಷ್ಟಕ್ಕೆಒಳಗಾಗಿದ್ದಾರೆ. ಇಂತಹಸಂಕಷ್ಟದಿಂದ ಪಾರಾಗುವ ನಿಟ್ಟಿನಲ್ಲಿ ಪ್ರಾರ್ಥಿಸಲಾಗಿದೆ ಎಂದು ಹಜರಾತ್ ಇಮಾಂಸಾಬ್ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net