

ಚಿಕ್ಕಬಳ್ಳಾಪುರ
:
ಸಚಿವಸಂಪುಟ ವಿಸ್ತರಣೆಯ ವೇಳೆ ಅವಕಾಶ ವಂಚಿತರಾದವರಿಗೆ ರಾಜಕೀಯ ಬೇರೆ ಅಧಿಕಾರ ದೊರಕಿಸಿಕೊಡಲುಚಿಂತಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಚಿವ ಸಂಪುಟದಲ್ಲಿ ಇರುವಂತಹುದು ಕಡಿಮೆ ಸ್ಥಾನಗಳು. ಇದರಿಂದ ಶಾಸಕ ಎಲ್ಲರನ್ನೂ ಸಚಿವರನ್ನಾಗಿಸಲುಸಾಧ್ಯವಾಗುವುದಿಲ್ಲ. ಇದಕ್ಕೆ ಅವಕಾಶ
ದೊರೆಯದಿದ್ದವರಿಗೆ
ಬೇರೆ
ಬೇರೆ
ರೀತಿ ಅಧಿಕಾರ ಕೊಡಲಾಗುತ್ತದೆ. ಈ ಬಗ್ಗೆ
ಮುಖ್ಯಮಂತ್ರಿಗಳು ಪಕ್ಷದ
ಹಿರಿಯ
ನಾಯಕರು
ಮತ್ತು
ಹಿರಿಯ
ಶಾಸಕರ
ಜತೆ ಚರ್ಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಂಬರುವ ವಿಧಾನಸಭಾ
ಚುನಾವಣೆಯಲ್ಲಿ
ಅಧಿಕಾರಕ್ಕೆ
ಬರುವುದಾಗಿಹೇಳಿರುವ ಬಿಜೆಪಿ
ಅಧ್ಯಕ್ಷ
ಬಿ
.
ವೈ
ವಿಜಯೇಂದ್ರರದ್ದು
ತಿರುಕನ
ಕನಸು. ಇದು ಭವಿಷ್ಯದಲ್ಲಿ ಗೊತ್ತಾಗುತ್ತದೆ ಎಂದುವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಕಾಡುತ್ತಿರುವ
ಬರಸಮಸ್ಯೆಗಳ
ಪರಿಹಾರಕ್ಕೆ
ಮುಂಗಡವಾಗಿ ಅಗತ್ಯ ಅನುದಾನಕ್ಕೆ ಮನವಿ ಮಾಡಿದರೂ ಕೇಂದ್ರ
ಸರ್ಕಾರ
ಸ್ಪಂದಿಸಿಲ್ಲ.ಇದಕ್ಕೆ ರಾಜ್ಯದಿಂದ ಮತ್ತೆ ಸರ್ವ ಪಕ್ಷಗಳ ಸಂಸದರ ನಿಯೋಗ ತೆರಳಿ ಗಮನ ಸೆಳೆಯಲಾಗುತ್ತದೆ ಎಂದು
ತಿಳಿಸಿದ್ದಾರೆ.