ನಿವೇಶನ ಹಂಚಿಕೆಗೆ ಬಡತನ ಮಾನದಂಡ

ಗೌರಿಬಿದನೂರು ತಾಲೂಕಿನ ಚಿಕ್ಕಕುರಗೋಡು ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಆಶ್ರಯ ಸಮಿತಿ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯಲ್ಲಿ ಶಾಸಕ ಕೆ.ಎಚ್​. ಪುಟ್ಟಸ್ವಾಮಿಗೌಡ ಮಾತನಾಡಿದರು. ತಹಸೀಲ್ದಾರ್​ ಕೆ.ಎಂ.ಅರವಿಂದ್​, ತಾಪಂ ಇಒ ಜಿ.ಕೆ.ಹೊನ್ನಯ್ಯ, ಜಿಲ್ಲಾ ನೋಡಲ್​ ಅಧಿಕಾರಿ ಜ್ಯೋತಿ ಲಕ್ಷಿ$್ಮ, ಪಿಡಿಒ ಮಧುಸೂದನ್​ ಇದ್ದರು.
ಗೌರಿಬಿದನೂರು ತಾಲೂಕಿನ ಚಿಕ್ಕಕುರಗೋಡು ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಆಶ್ರಯ ಸಮಿತಿ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯಲ್ಲಿ ಶಾಸಕ ಕೆ.ಎಚ್​. ಪುಟ್ಟಸ್ವಾಮಿಗೌಡ ಮಾತನಾಡಿದರು. ತಹಸೀಲ್ದಾರ್​ ಕೆ.ಎಂ.ಅರವಿಂದ್​, ತಾಪಂ ಇಒ ಜಿ.ಕೆ.ಹೊನ್ನಯ್ಯ, ಜಿಲ್ಲಾ ನೋಡಲ್​ ಅಧಿಕಾರಿ ಜ್ಯೋತಿ ಲಕ್ಷಿ$್ಮ, ಪಿಡಿಒ ಮಧುಸೂದನ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೇಶನ ಹಂಚಿಕೆಗೆ ಬಡತನ ಮಾನದಂಡ
ಗೌರಿಬಿದನೂರು: ತಾಲೂಕಿನಲ್ಲಿ ಸಮರೋಪಾದಿಯಲ್ಲಿ ನಿವೇಶನ ರಹಿತರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಬಡವರಿಗೆ ನಿವೇಶನ ವಿತರಿಸುವುದನ್ನು ಪ್ರಮುಖ ಮಾನದಂಡವನ್ನಾಗಿಸಿಕೊಳ್ಳಲಾಗಿದೆ. ಯಾವುದೇ ಪಕ್ಷಪಾತ ಮಾಡುವುದಿಲ್ಲ ಎಂದು ಶಾಸಕ ಕೆ.ಎಚ್​.ಪುಟ್ಟಸ್ವಾಮಿ ಗೌಡ ಹೇಳಿದರು.
ತಾಲೂಕಿನ ಚಿಕ್ಕಕುರಗೋಡು ಗ್ರಾಪಂನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಶ್ರಯ ಸಮಿತಿ ಫಲಾನುಭವಿಗಳ ಆಯ್ಕೆಯ ಗ್ರಾಮಸಭೆಯಲ್ಲಿ ಮಾತನಾಡಿ, ಬಡವರಿಗೆ ಸೂರು ಕಲ್ಪಿಸುವುದು ಸರ್ಕಾರ ಮತ್ತು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಡೆಸಿದ ನಿರಂತರ ಪ್ರಯತ್ನಗಳ ಫಲವಾಗಿ ಬಡವರಿಗೆ ನಿವೇಶನ ಹಂಚಿಕೆ ಮಾಡುವ ಕಾಲ ಕೂಡಿ ಬಂದಿದೆ. ಇದರಲ್ಲಿ ಪಕ್ಷ, ರಾಜಕೀಯ ಮಾಡುವ ವಿಚಾರವೇ ಇಲ್ಲ. ಬಡತನವೊಂದೇ ಮಾನದಂಡ ಎಂದರು.
ಸಭೆಯಲ್ಲಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ವಹಿಸಲಾಗುವುದು. ನಿವೇಶನಕ್ಕಾಗಿ ಮಂಜೂರಾಗಿರುವ ಜಮೀನುಗಳಲ್ಲಿ ವಾಸಯೋಗ್ಯಕ್ಕೆ ಅನುಕೂಲವಾಗುವಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ತಾಪಂ ಇಒ ಜಿ.ಕೆ.ಹೊನ್ನಯ್ಯ ಮಾತನಾಡಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಗ್ರಾಮ ಸಭೆಗೂ ಮುನ್ನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವ್ಯಾಪಕ ಪ್ರಚಾರ ನಡೆಸಿದ್ದಾರೆ. ಅರ್ಜಿ ಸಲ್ಲಿಸಲು ಅರಿವು ಮೂಡಿಸಲಾಗಿದೆ. ಪಂಚಾಯಿತಿ ಅಧಿಕಾರಿಗಳು ಮತ್ತು ನೋಡಲ್​ ಅಧಿಕಾರಿಗಳು ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಸಮೀಕ್ಷೆ ನಡೆಸಿದ್ದಾರೆ ಎಂದರು.
ಲಾನುಭವಿ ಮಹೇಶ್​ ಮಾತನಾಡಿ, ಇದೇ ಮೊದಲ ಬಾರಿಗೆ ವ್ಯಾಪಕ ಪ್ರಚಾರ ನಡೆಸಿ ಗ್ರಾಮಸಭೆಗಳನ್ನು ನಡೆಸಲಾಗುತ್ತಿದೆ. ಪಾರದರ್ಶಕವಾಗಿ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತಿದೆ ಎಂದರು.
3 ಪಂಚಾಯಿತಿಗಳಲ್ಲಿ ಆಯ್ಕೆ: ಶುಕ್ರವಾರ ಮೂರು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳ ಆಯ್ಕೆ ನಡೆಯಿತು. ಗೆದರೆ ಪಂಚಾಯಿತಿಯಲ್ಲಿ 5 ಎಕರೆ 31 ಗುಂಟೆ ಜಮೀನು ಮಂಜೂರಾಗಿದ್ದು, ನಿವೇಶನಕ್ಕಾಗಿ 541 ಅರ್ಜಿ ಸಲ್ಲಿಕೆಯಾಗಿವೆ. ಮೊದಲ ಹಂತದಲ್ಲಿ 121 ಮಂದಿ ಫಲಾನುಭವಿಗಳ ಆಯ್ಕೆ ಮಾಡಲಾಯಿತು. ಪಿಡಿಒ ಎಂ.ಎನ್​.ಬಾಲಕೃಷ್ಣ ಭಾಗವಹಿಸಿದ್ದರು. ಚಿಕ್ಕಕುರಗೋಡು ಗ್ರಾಪಂಗೆ 6 ಎಕರೆ 24 ಗುಂಟೆ ಜಮೀನು ಮಂಜೂರಾಗಿದ್ದು, 603 ಅರ್ಜಿ ಸಲ್ಲಿಕೆಯಾಗಿವೆ. ಮೊದಲ ಹಂತದಲ್ಲಿ 66 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಗೊಂದಲ ವಾತಾವರಣ: ಚಿಕ್ಕಕುರುಗೋಡು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ನಿವೇಶನ ಪಟ್ಟಿ ತಯಾರಿಕಾ ವಿಚಾರದಲ್ಲಿ ಏಕಪಯವಾಗಿ ಮಾಡಲಾಗಿದೆ. ಒಂದು ಗ್ರಾಮದವರಿಗೆ ಇನ್ನೊಂದು ಗ್ರಾಮದಲ್ಲಿ ನಿವೇಶನ ನೀಡಲಾಗಿದೆ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಪೊಲೀಸರ ಮಧ್ಯ ಪ್ರವೇಶದಿಂದ ಕೆಲವರನ್ನು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು.
ಸಭೆಯಲ್ಲಿ ನೋಡಲ್​ ಅಧಿಕಾರಿ, ತಹಸೀಲ್ದಾರ್​ ಅರವಿಂದ್​, ಪಿಡಿಒ ಮಧುಸೂದನ್​ ಭಾಗವಹಿಸಿದ್ದರು. ತೊಂಡೇಬಾವಿ ಪಂಚಾಯಿತಿಗೆ 3 ಎಕರೆ 7 ಗುಂಟೆ ಜಮೀನು ಮಂಜೂರಾಗಿದ್ದು, 208 ಅರ್ಜಿ ಸಲ್ಲಿಕೆಯಾಗಿವೆ. ಮೊದಲ ಹಂತದಲ್ಲಿ 93 ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಎನ್​.ಪೃಥ್ವಿಬಾ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net