ಗುಡಿಬಂಡೆ: ಕಲ್ಲುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿಯಿಂದ ಕಲ್ಲು ಬಿದ್ದು, ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದಾರೆ. ಪೆರೇಸಂದ್ರ ಠಾಣೆಯ ಪೇದೆ, ತಾಲೂಕಿನ ಮ್ಯಾಕಲಹಳ್ಳಿ ಹಸೀನಾ ಗಾಯಾಳು. ಕೆಲಸ ಮುಗಿಸಿ ಶುಕ್ರವಾರ ಮನೆಗೆ ವಾಪಸಾಗುತ್ತಿದ್ದಾಗ ಬೊಮ್ಮಗಾನಹಳ್ಳಿ ಮತ್ತು ರೇಣುಮಾಕಲಹಳ್ಳಿ ಮಧ್ಯದಲ್ಲಿರುವ ಕೆರೆ ಕಟ್ಟೆ ಮೇಲೆ ಗುಡಿಬಂಡೆ ಭಾಗದಿಂದ ಕಲ್ಲುಗಳನ್ನು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ನಿಂದ ಹಸೀನಾ ಅವರ ದ್ವಿಚಕ್ರ ವಾಹನದ ಮೇಲೆ ಕಲ್ಲು ಬಿದ್ದು ಅವಡ ಸಂಭವಿಸಿದೆ. ಹಸೀನಾ ಅವರ ಕಾಲು, ದವಡೆ ಮುರಿದಿದ್ದು, ಮುದ್ದೇನಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಡಿಬಂಡೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.