ಕರ್ಕಶ ಧ್ವನಿಯ ದ್ವಿಚಕ್ರ ವಾಹನಗಳ ಸೈಲೆನ್ಸರ್‌ ನಾಶಪಡಿಸಿದ ಪೊಲೀಸರು

ಕರ್ಕಶ ಧ್ವನಿಯ ದ್ವಿಚಕ್ರ ವಾಹನಗಳ ಸೈಲೆನ್ಸರ್‌ ನಾಶಪಡಿಸಿದ ಪೊಲೀಸರು
ಕರ್ಕಶ ಧ್ವನಿಯ ದ್ವಿಚಕ್ರ ವಾಹನಗಳ ಸೈಲೆನ್ಸರ್‌ ನಾಶಪಡಿಸಿದ ಪೊಲೀಸರು
Published on

ಚಿಕ್ಕಬಳ್ಳಾಪುರ:ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ನಿರ್ದಾಕ್ಷಿಣ್ಯವಾಗಿ ದಂಡಾಸ್ತ್ರ ಪ್ರಯೋಗಿಸುತ್ತಿರುವಪೊಲೀಸರು, ಕರ್ಕಶ ಧ್ವನಿ ಹೊರ ಸೂಸುತ್ತಿದ್ದ ದ್ವಿಚಕ್ರ ವಾಹನಗಳ ಸೈಲೆನ್ಸರ್‌ ಗಳನ್ನುಸಾರ್ವಜನಿಕರ ಸಮ್ಮುಖದಲ್ಲಿ ನಾಶಪಡಿಸಿದರು.

ಇಲ್ಲಿನ ಅಂಬೇಡ್ಕರ್‌ವೃತ್ತದಲ್ಲಿ ರಸ್ತೆಯುದ್ದಕ್ಕೂ ಜೋಡಿಸಿದ್ದ ಸೈಲೆನ್ಸರ್‌ ಗಳ ಮೇಲೆ ಬುಲ್ಡೋಜರ್‌ ಗಳನ್ನುಹರಿಸಲಾಯಿತು.

ಜಿಲ್ಲೆಯಲ್ಲಿ ವಾಹನಚಾಲನೆಯ ವೇಳೆ ಚಾಲನಾ ಪರವಾನಗಿ, ವಿಮೆ, ನೋಂದಣಿ ಕಾರ್ಡ್‌ ಸೇರಿದಂತೆ ಅಗತ್ಯದಾಖಲೆಗಳನ್ನು ಹೊಂದಿರುವ, ಅದರಲ್ಲೂ ದ್ವಿಚಕ್ರ ವಾಹನದ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವವಿಚಾರವಾಗಿ ಪೊಲೀಸ್‌ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪ್ರಮುಖ ರಸ್ತೆಗಳು,ವೃತ್ತಗಳು, ಹೆದ್ದಾರಿಗಳಲ್ಲಿ ಸಂಚಾರಿ ಠಾಣೆಯ ಪೊಲೀಸರು ನಿರಂತರ ಕಾರ್ಯಾಚರಣೆಯಲ್ಲಿತೊಡಗಿದ್ದಾರೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಬಿರುಸುಗೊಳಿಸಿದ್ದಾರೆ.

ಸಿನಿಮಾಗಳಲ್ಲಿನಸಾಹಸ ಪ್ರದರ್ಶನಗಳನ್ನು ಅನುಕರಿಸುವ ನಿಟ್ಟಿನಲ್ಲಿ ಕೆಲ ಬೈಕು ಸವಾರರು ಕರ್ಕಶ ಧ್ವನಿ ಹೊರಸೂಸುವಸೈಲೆನ್ಸರ್‌ ಗಳನ್ನು ವಾಹನಗಳಿಗೆ ಅಳವಡಿಸುವುದು, ದ್ವಿಚಕ್ರ ವ್ಹೀಲಿಂಗ್‌, ಅತಿ ವೇಗದ ಚಾಲನೆಯಧೋರಣೆಯನ್ನು ತೋರುತ್ತಿದ್ದಾರೆ. ಇದರಿಂದ ಅಪಘಾತ ಉಂಟಾಗುತ್ತಿದೆ. ಸುಗಮ ಸಂಚಾರಕ್ಕೆ ತೊಡಕಾಗಿದೆ.ಇದಕ್ಕೆ ಕಿಡಿಗೇಡಿಗಳಿಗೆ ಪೊಲೀಸ್‌ ಇಲಾಖೆ ಪಾಠ ಕಲಿಸುತ್ತಿದೆ. ಇದರ ನಡುವೆ ಇತ್ತೀಚಿಗಿನದಿನಗಳಲ್ಲಿ ವಶಪಡಿಸಿಕೊಂಡಿರುವ ಸೈಲೆನ್ಸರ್‌ ಗಳನ್ನು ಸಾರ್ವಜನಿಕ ಜಾಗೃತಿ ಮೂಡಿಸುವ ಸಲುವಾಗಿಪ್ರಮುಖ ವೃತ್ತದಲ್ಲಿ ಬುಲ್ಡೋಜರ್‌ ಹರಿಸಿ, ನಾಶಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net