ಹಂದಿ ಕದ್ದವನ ಬಂಧನ

 ಆನಂದ್​ (29) ಬಂಧಿತ
ಆನಂದ್​ (29) ಬಂಧಿತ
Published on

ಪ್ರಮುಖ ಮುಖ್ಯಾಂಶಗಳು

  • ಸಾಕಾಣೆದಾರ ಆನಂದ್​ (29) ಬಂಧಿತ.
  • 4.50 ಲಕ್ಷ ರೂ. ಮೌಲ್ಯದ ಹಂದಿಗಳನ್ನು ಕಳವು
  • 3 ಲಕ್ಷ ರೂ. ವಶಕ್ಕೆ
  • ತಲೆ ಮರೆಸಿಕೊಂಡ ಆರೋಪಿಗಳ ಸೆರೆಗೆ ತಲಾಶ್​
ಚಿಂತಾಮಣಿ: ತಾಲೂಕಿನ ಬುರುಡುಗುಂಟೆ ಹೊರವಲಯದಲ್ಲಿ ತೆರದ ಶೆಡ್​ಗಳಲ್ಲಿದ್ದ 4.50 ಲಕ್ಷ ರೂ. ಮೌಲ್ಯದ ಹಂದಿಗಳನ್ನು ಕಳವು ಮಾಡಿದ್ದವನನ್ನು ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿ, 3 ಲಕ್ಷ ರೂ. ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರದ ಅನಂತಪುರ ಜಿಲ್ಲೆಯ ಲೆನಿನ್​ ನಗರದ ಹಂದಿ ಸಾಕಾಣೆದಾರ ಆನಂದ್​ (29) ಬಂಧಿತ.
ಬುರುಡುಗುಂಟೆ ಗ್ರಾಮದ ವೆಂಕಟಪತಿ ಜಮೀನಿನಲ್ಲಿ 9 ತೆರೆದ ಶೆಡ್​ ನಿರ್ಮಿಸಿ ಸೀಮೆ ಹಂದಿ ಸಾಕುತ್ತಿದ್ದರು. ಶೆಡ್​ಗಳಲ್ಲಿ 100 ರಿಂದ 150 ಕೆಜಿಯ 25 ಹಂದಿ, 30ರಿಂದ 40 ಕೆಜಿಯ 85 ಸಣ್ಣ ಹಂದಿಗಳು ನ.6 ರಂದು ಕಳವಾಗಿದ್ದವು. ನ.9 ರಂದು ಮಾಲೀಕ ಪ್ರಕರಣ ದಾಖಲಿಸಿದ್ದರು. ಜಿಲ್ಲಾ ಎಸ್​ಪಿ ಕುಶಲ್​ ಚೌಕ್ಸೆ ಮಾರ್ಗದರ್ಶನದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್​ ಇನ್​ಸ್ಪೆಕ್ಟರ್​ ಜಿ.ಸಿ.ನಾರಾಯಣಸ್ವಾಮಿ, ಪಿಎಸ್​ಐ ಜಗದೀಶ್​ ನೇತೃತದ ಅಪರಾಧ ಸಿಬ್ಬಂದಿ ಪಿ.ಎನ್​.ಅಮರೇಶ, ಜಗದೀಶ, ವಿಶ್ವನಾಥ, ನಾರಾಯಣ್​, ತನಿಖಾ ಸಹಾಯಕ ಮಲ್ಲಿಕಾರ್ಜುನ್​ ದವಲೇಶ್ವರ್​ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ 4 ಜನ ಸಹಚರರೊಂದಿಗೆ ಕದ್ದು, ಬೇರೆಡೆ ಮಾರಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳು, ವಾಹನವನ್ನು ಶ್ರೀದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಕೆಂಚಾರ್ಲಹಳ್ಳಿ ಪೊಲೀಸ್​ ಇನ್​ಸ್ಪೆಕ್ಟರ್​ ಜಿ.ಸಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net