ಕ್ರೀಡಾಕೂಟ, ಕಲೋತ್ಸವಗಳಲ್ಲಿ ಭಾಗವಹಿಸಿ

ಚಿಂತಾಮಣಿ ತಾಲೂಕಿನ ಕೈವಾರ ಅಂಬೇಡ್ಕರ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನವನ್ನು ಬಿಇಒ ಉಮಾದೇವಿ ವಿಸಿದರು. ಬಿಆರ್​ಸಿ ಸಮನ್ವಯಾಧಿಕಾರಿ ಗಿರಿಜಮ್ಮ, ಸಂಸ್ಥೆ ಮುಖ್ಯಸ್ಥ ನಂಜಪ್ಪ, ಎಸ್​.ಎಂ.ರೋಜಾ, ಮುಖ್ಯಶಿಕ್ಷಕ ಸುರೇಶ, ಮಂಜುಳಾ, ನೇತ್ರಾ ಇದ್ದರು.
ಚಿಂತಾಮಣಿ ತಾಲೂಕಿನ ಕೈವಾರ ಅಂಬೇಡ್ಕರ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನವನ್ನು ಬಿಇಒ ಉಮಾದೇವಿ ವಿಸಿದರು. ಬಿಆರ್​ಸಿ ಸಮನ್ವಯಾಧಿಕಾರಿ ಗಿರಿಜಮ್ಮ, ಸಂಸ್ಥೆ ಮುಖ್ಯಸ್ಥ ನಂಜಪ್ಪ, ಎಸ್​.ಎಂ.ರೋಜಾ, ಮುಖ್ಯಶಿಕ್ಷಕ ಸುರೇಶ, ಮಂಜುಳಾ, ನೇತ್ರಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ
  • ಕಿವಿಮಾತು ವಸ್ತು ಪ್ರದರ್ಶನಕ್ಕೆ ಚಾಲನೆ
  • ವಿಜ್ಞಾನ ವಸ್ತು ಪ್ರದರ್ಶನ
ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ವಿಜ್ಞಾನ ವಸ್ತು ಪ್ರದರ್ಶನದಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯುತ್ತದೆ. ದಿನ ನಿತ್ಯ ಕಣ್ಣ ಮುಂದೆ ನಿಸರ್ಗದಲ್ಲಿ ನಡೆಯುವ ವಿದ್ಯಮಾನಗಳನ್ನು ನೋಡಿದಾಗ ಹೊಸ ಸಂಶೋಧನೆಗೆ ನಾಂದಿಯಾಗುತ್ತದೆ ಎಂದು ಚಿಂತಾಮಣಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಹೇಳಿದರು.
ತಾಲೂಕಿನ ಕೈವಾರ ಅಂಬೇಡ್ಕರ್​ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನದಲ್ಲಿ ಮಾತನಾಡಿ, ಶಾಲಾ ಮಟ್ಟದಲ್ಲಿ ನಡೆಯುವ ಪ್ರತಿಯೊಂದು ವಸ್ತು ಪ್ರದರ್ಶನ, ಕ್ರೀಡೆ, ಸಾಂಸತಿಕ ಕಾರ್ಯಕ್ರಮ ಸೇರಿ ಕಲೋತ್ಸವಗಳಲ್ಲಿ ಭಾಗವಹಿಸಿ ಎಂದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸುಬ್ಬರೆಡ್ಡಿ ಮಾತನಾಡಿ, ವಿಜ್ಞಾನ ಇದ್ದಲ್ಲಿ ತಂತ್ರಜ್ಞಾನ ಇರುತ್ತದೆ. ಗ್ರಾಮೀಣದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಿ ನಗರ ಶಾಲೆಗಳ ಮಕ್ಕಲಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದೀರಿ ಎಂದರು.
ಸಿಆರ್​ಪಿ ಎಜಾಜ್​ ಬೇಗ್​ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಹೊರ ತೆಗೆಯಲು ಸರ್ಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಸದುಪಯೋಗ ಪಡೆದು ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರತಿಭೆ ಅನಾವರಣಗೊಳಿಸಿ. ಕೈಗಾರಿಕೆಗಳಿಂದ ಆಗುವ ಪರಿಸರ ಮಾಲಿನ್ಯ, ನೀರಿನ ಕಲುಷಿತ, ರಾಸಾಯನಿಕ ಮಿಶ್ರಣದಿಂದ ಆಗುವ ಪರಿಣಾಮ, ಗಣಿತ ಸಮೀಕರಣ, ಪ್ರಮೇಯ ಪ್ರಾಜೆಕ್ಟ್​ಗಳು, ಹಳೆಯ ನಾಣ್ಯ, ಅಂಚೆ ಚೀಟಿಗಳ ಸಂಗ್ರಹಣೆ, ತಾಜಮಹಲ್​, ಸಂಸತ ಭವನ, ರಾಮಮಂದಿರ, ಕ್ರಿಕೆಟ್​ ಸ್ಟೇಡಿಯಂ, ಗಣಕಯಂತ್ರ ಮಾಡಲ್​, ಎಲ್ಲ ವಿಷಯಗಳ ಚಾರ್ಟ್​, ವಸ್ತು ಪ್ರದರ್ಶನದ ಆಕರ್ಷಣೆಯಾಗಿದ್ದವು.ವಿದ್ಯಾರ್ಥಿಗಳು ಅತಿಥಿಗಳನ್ನು ಬ್ಯಾಂಡ್​ ಸೆಟ್​ ಬಾರಿಸುತ್ತಾ ಬರಮಾಡಿಕೊಂಡರು. ಅಥಿತಿಗಳು ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿದರು. ಶಿಕ್ಷಕರಾದ ಉಮೇಶ್​, ಶ್ರೀಧರ್​ ಹಿರೇಮಠ, ವೆಂಕಟೇಶ್​ ಬಾಬು, ಧನುಷ್​, ವಿವೇಕ್​, ಲಕ್ಷಿ$್ಮ, ಗೋಪಮ್ಮ, ಭಾಗ್ಯಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net