ನಗರದ ಕೆಜಿಎನ್ ಬಡಾವಣೆ ವರಲಕ್ಷಿ$್ಮ (30) ದೀಪಾವಳಿ ಬೆನಿಫಿಟ್ ಸ್ಕೀಮ್ ಹೆಸರಿನಲ್ಲಿ ಚೀಟಿ ತೆರೆದು 6000 ರೂ.ಗೆ 1000 ಸೇರಿಸಿ 7 ಸಾವಿರ ರೂ. ಪಟಾಕಿ ಬಾಕ್ಸ್, 1 ಸ್ಟೀಲ್ ಪಾತ್ರೆ ನೀಡುವುದಾಗಿ ನೂರಾರು ಮಹಿಳೆಯರಿಂದ ಪ್ರತಿ ತಿಂಗಳು ಹಣ ಕಟ್ಟಿಸಿಕೊಂಡಿದ್ದರು. ಆದರೆ, ಅಕ್ಟೋಬರ್ನಲ್ಲಿ ಮನೆಗೆ ಬೀಗ ಹಾಕಿ ಗಂಡನೊಂದಿಗೆ ಪರಾರಿಯಾಗಿದ್ದು, ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಡಿಗೆ ಮನೆಯಲ್ಲಿದ್ದ ಮಧ್ಯವರ್ತಿ ಸಾಮಗ್ರಿ ಸಾಗಿಸುತ್ತಿದ್ದಾಗ ವರಲಕ್ಷಿ$್ಮ, ಗಂಡ ಅಂಬರೀಷ್ ಬರುವವರೆಗೂ ಹಸ್ತಾಂತರ ಮಾಡದಂತೆ ಪ್ರತಿಭಟಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಮನೆ ಮಾಲೀಕ, ಹಣ ಕಳೆದುಕೊಂಡ ಮಹಿಳೆಯರನ್ನು ಸಮಾಧಾನಪಡಿಸಿ ಎಲ್ಲರೂ ಠಾಣಾಧಿಕಾರಿಗಳನ್ನು ಭೇಟಿ ಮಾಡುವಂತೆ ಹೇಳಿ ಸಾಮಗ್ರಿ ಹಸ್ತಾಂತರ ತಡೆದರು.