ಇಲಾಖೆ ವ್ಯಾಪ್ತಿಯಲ್ಲಿ 6ಕ್ಕೂ ಹೆಚ್ಚು ವಿವಿಧ ಸಮುದಾಯ ಭವನ ನಿರ್ಮಿಸಿದ್ದು, ನಿರ್ವಹಣೆಯಿಲ್ಲದೆ ಪಾಳು ಬಿದ್ದಿದೆ. ಇಲಾಖೆ ವಿವಿಧ ಸಮುದಾಯಗಳ ಪ್ರಗತಿಗೆ ಮತ್ತು ಅವರ ಸಮುದಾಯದ ಶುಭಕಾರ್ಯಗಳು ಮಾಡಿಕೊಳ್ಳಲು ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳಿಗೆ ಸೌಕರ್ಯಗಳನ್ನು ಕಲ್ಪಿಸಿ ನಗರಸಭೆಗೆ ಹಸ್ತಾಂತರಿಸುವಲ್ಲಿ ವಿಫಲರಾಗಿದ್ದಾರೆ. ಎರಡು ಮೆಟ್ರಿಕ್ ನಂತರ ಬಾಲಕಿಯರ ಕಾಲೇಜು ವಿದ್ಯಾರ್ಥಿನಿಲಯಗಳು ಒಂದೇ ಕಟ್ಟಡದಲ್ಲಿ ನಡೆಯುತ್ತಿರುವುದನ್ನು ತಪ್ಪಿಸಲು ಮೂರುವರೆ ವರ್ಷದ ಹಿಂದೆ ಮಾದನಹಳ್ಳಿ ಕೆರೆಯಂಗಳದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಮೆಟ್ರಿಕ್ ನಂತರ ಬಾಲಕಿಯರ ಕಾಲೇಜು ವಿದ್ಯಾರ್ಥಿನಿಯರ ನಿಲಯ ನಿರ್ಮಿಸಲಾಯಿತು. ಶಾಸಕ ಪುಟ್ಟಸ್ವಾಮಿಗೌಡ ಕಟ್ಟಡ ಉದ್ಘಾಟಿಸಿ ಒಂದೂವರೆ ವರ್ಷ ಕಳೆದಿದೆ. ಆದರೆ ವಿದ್ಯಾರ್ಥಿಗಳನ್ನು ದಾಖಲು ಮಾಡಿ ಅವರಿಗೆ ಉಪಯೋಗ ಕಲ್ಪಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ. ಅಧಿಕಾರಿಯ ರ್ನಿಲಕ್ಷ$್ಯದಿಂದ ನಿಲಯ ಬಳಕೆಯಾಗದೆ ವ್ಯರ್ಥವಾಗುತ್ತಿದೆ. ಈ ಹಿಂದಿನಂತೆಯೇ ಒಂದೇ ಕಟ್ಟಡದಲ್ಲಿ 2 ನಿಲಯಗಳನ್ನು ನಡೆಸಲಾಗುತ್ತಿದೆ. ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಬರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಒಂದು ಸಭೆ ಕೂಡ ಕರೆದಿಲ್ಲ. ಅವರಿಗೆ ಸೌಲಭ್ಯಗಳು ಮರೀಚಿಕೆಯಾಗಿವೆ.