ಹೊಸ ವರ್ಷಾಚರಣೆ, ಪ್ರವಾಸಿತಾಣಗಳಲ್ಲಿ ಜನರ ದಟ್ಟಣೆ ಹೆಚ್ಚಳ

ಚಿಕ್ಕಬಳ್ಳಾಪುರದ ಈಶ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಸೇರಿರುವ ಜನ ಸಮೂಹ
ಚಿಕ್ಕಬಳ್ಳಾಪುರದ ಈಶ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಸೇರಿರುವ ಜನ ಸಮೂಹ
Published on
ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಗುರುವಾರ ಪ್ರವಾಸಿಗರು ಭೇಟಿ ನೀಡಿ, ಖುಷಿಪಟ್ಟರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ನಂದಿ ಬೆಟ್ಟ, ಕೈವಾರ ಬೆಟ್ಟ, ಸ್ಕಂದಗಿರಿ ಬೆಟ್ಟ, ಆವಲಬೆಟ್ಟಕ್ಕೆ ಡಿ.31 ರಿಂದ ಜ.1 ರ ಮಧ್ಯಾಹ್ನದವರೆಗೂ ಜನರ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಇದರಿಂದ ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಈ ಭಾಗದಲ್ಲಿ ಪ್ರವಾಸಿಗರ ಪ್ರಮಾಣವು ಕಡಿಮೆ ಇತ್ತು. ಇನ್ನು ಸಂಜೆ ತಾಲೂಕಿನ ಹನುಮಂತಪುರ ಸಮೀಪದ ಈಶ ಆದಿಯೋಗಿ ಧ್ಯಾನ ಕೇಂದ್ರಕ್ಕೆ ಸಂಜೆಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದು ಈ ಆಧ್ಯಾತ್ಮಿಕ ತಾಣವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು.
ತಡರಾತ್ರಿ ಬಹುತೇಕ ಕಡೆ ಪಟಾಕಿ ಸಿಡಿಸಿ, ಸಿಹಿ ಹಂಚುವುದರೊಂದಿಗೆ ಸಾಮೂಹಿಕ ನೃತ್ಯದ ಖುಷಿಯಲ್ಲಿ ಹೊಸ ವರ್ಷದ ದಿನವನ್ನು ಆಚರಿಸಲಾಯಿತು. ರೆಸಾರ್ಟ್‌, ಹೋಟೆಲ್‌, ಹಲವು ಮನೆಗಳಲ್ಲಿ ಪಾರ್ಟಿಗಳು ನಡೆದವು. ಕುಟುಂಬಸ್ಥರು ಹಾಗೂ ಗೆಳೆಯರ ತಂಡವು ಪರಸ್ಪರ ಶುಭಾಷಯಗಳನ್ನು ಹೇಳಿಕೊಂಡು ಘೋಷಣೆಗಳನ್ನು ಕೂಗಿದರು. ಜತೆಯಾಗಿ ಕುಣಿದು ಕುಪ್ಪಳಿಸಿದರು. ಇನ್ನು ಚರ್ಚುಗಳಲ್ಲಿ ಪ್ರತಿ ವರ್ಷದಂತೆ ಸಾಮೂಹಿಕ ಪ್ರಾರ್ಥನೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net