

ಚಿಕ್ಕಬಳ್ಳಾಪುರ:ಪ್ರವಾಸಿತಾಣ ನಂದಿ ಗಿರಿಧಾಮದಲ್ಲಿ ಕೈಗೊಂಡಿದ್ದ ಮಾನ್ಸೂನ್ ಮ್ಯಾರಥಾನ್ ಓಟದ ವೇಳೆ ಕ್ರೀಡಾಪಟುಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪಂಜಾಬ್ ಮೂಲದಅಮನ್
ದೀಪ್
ಸಿಂಗ್
ಜಗಡೆ
(
೩೨
)
ಮೃತ.ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಯುವಜನಸೇವಾ ಹಾಗೂ ಕ್ರೀಡಾ ಇಲಾಖೆಯು
'
ಮಾನ್ಸೂನ್
ಮ್ಯಾರಥಾನ್
'
ಎರಡನೇಆವೃತ್ತಿಯ
ಓಟದಲ್ಲಿ ಭಾಗವಹಿಸಿದ್ದರು. ಇದೇವೇಳೆ ೨೧ ಕಿ.ಮೀ ವಿಭಾಗದಲ್ಲಿ ಓಡಿದ ಅಮನ್ ಅರ್ಧ ದೂರ ಸಾಗುತ್ತಿದ್ದಂತೆ ಅಸ್ವಸ್ಥಗೊಂಡಿದ್ದಾರೆ.ಇದರಿಂದ ಸ್ಥಳದಲ್ಲಿದ್ದ ಕ್ರೀಡಾಪಟುಗಳು ತಕ್ಷಣ ವಾಹನದಲ್ಲಿ ಸಮೀಪದ ಮುದ್ದೇನಹಳ್ಳಿಯ ಶ್ರೀಮಧುಸೂದನ ಸಾಯಿ ವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ,ಆತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಮೃತನು ಪಂಜಾಬ್‌ಮೂಲದವನು. ಬೆಂಗಳೂರಿನಲ್ಲಿನ ಮಾನ್ಯತಾ ಟೆಕ್ ಪಾರ್ಕ್‌ನ ಖಾಸಗಿ ಕಂಪನಿಯ ಉದ್ಯೋಗಿ. ನಿರಂತರವಾಗಿಮ್ಯಾರಥಾನದಲ್ಲಿ ಓಟದಲ್ಲಿ ಭಾಗವಹಿಸುತ್ತಿದ್ದನು. ಅದರಂತೆ ಭಾನುವಾರ ಕೈಗೊಂಡಿದ್ದ
'
ಮಾನ್ಸೂನ್
ಮ್ಯಾರಥಾನ್
'
ನಲ್ಲಿಅರ್ಧ ದಾರಿ ಓಡುತ್ತಿದ್ದಂತೆ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ. ಮೃತದೇಹವನ್ನುಜಿಲ್ಲಾಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಂದಿ ಗಿರಿಧಾಮ ಠಾಣೆಯಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.