

ಚಿಕ್ಕಬಳ್ಳಾಪುರ: ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮ ಆಚರಣೆವೇಳೆ ಜೆಡಿಎಸ್ ಗುಂಪಿನ ಗಲಾಟೆಯನಡುವೆ ಶಾಸಕಪ್ರದೀಪ್ ಈಶ್ವರ್ಮೀಸೆ ತಿರುವಿ,ತೊಡೆ ತಟ್ಟಿದ್ದಾರೆ.ಶಾಸಕರ ಕಾರಿಗೆಅಡ್ಡಲಾಗಿ ಪ್ರತಿಭಟನಾಕಾರರುನಿಂತುಕೊಂಡಾಗ ಪೊಲೀಸರುಹಾಗೂ ಶಾಸಕರಬೆಂಬಲಿಗರು ರಕ್ಷಣೆಗೆಧಾವಿಸಿದರು. ಇದೇವೇಳೆ ತೆರೆದವಾಹನದಲ್ಲಿ ನಿಂತುನನ್ನನ್ನು ಏನೂಮಾಡೋದಿಕ್ಕೆ ಆಗಲ್ಲ,ನಾನು ಹೆದರುವುದಿಲ್ಲಎಂಬ ಸಂದೇಶಸಾರುವಂತೆ ಸಿನಿಮಾಶೈಲಿಯಲ್ಲಿಶಾಸಕರು ತೊಡೆತಟ್ಟಿದ್ದಾರೆ.
ಕಾರ್ಯಕ್ರಮ ಮುಗಿಸಿಕೊಂಡುಹೋಗುತ್ತಿದ್ದ ಶಾಸಕರಮೇಲೆ ಚಪ್ಪಲಿಗಳನ್ನುಎಸೆಯಲಾಯಿತು. ಪೊಲೀಸರುಹತ್ತಿರಕ್ಕೆ ಹೋಗಲುಬಿಡುತ್ತಿಲ್ಲ ಎಂಬಹತಾಶ ಭಾವನೆಯಲ್ಲಿಹಲವರು ಕಾಲಿನಲ್ಲಿದ್ದಚಪ್ಪಲಿಗಳನ್ನು ತೆಗೆದುಎಸೆದರು. ಆವೇಳೆಗಾಗಲೇ ಬಿಗಿಭದ್ರತೆಯಲ್ಲಿ ಶಾಸಕರುವಾಹನದಲ್ಲಿ ಮುಂದಕ್ಕೆಹೋಗಿದ್ದು ಪರಿಸ್ಥಿತಿತಿಳಿಗೊಳಿಸುತ್ತಿದ್ದ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಕುಶಾಲ್ ಚೌಕ್ಸೆನೇತೃತ್ವದ ಪೊಲೀಸ್ಪಡೆಯ ಮೇಲೆಬಿದ್ದವು. ಇನ್ನುಕೈಯಲ್ಲಿ ಚಪ್ಪಲಿಗಳನ್ನುಹಿಡಿದುಕೊಂಡು ಎಸೆಯಲುಹೋಗುತ್ತಿದ್ದವರನ್ನು ಪೊಲೀಸರುಹಿಡಿದುಕೊಂಡು ಹೋಗಿದ್ದಾರೆ.