

ಚಿಕ್ಕಬಳ್ಳಾಪುರ
:
ಶಾಸಕ
ಎಸ್
.
ಎನ್
.
ಸುಬ್ಬಾರೆಡ್ಡಿಗೆ
ಸಚಿವ
ಸ್ಥಾನ
ಸಿಗದ
ಹಿನ್ನೆಲೆಯಲ್ಲಿ
ಆ
.
೫
ರಂದು
ಬಾಗೇಪಲ್ಲಿ
ವಿಧಾನಸಭಾ
ಕ್ಷೇತ್ರ
(
ಚೇಳೂರು
,
ಗುಡಿಬಂಡೆ
,
ಬಾಗೇಪಲ್ಲಿ
ತಾಲೂಕು
)
ಬಂದ್
ಗೆ
ಕರೆ
ನೀಡಲಾಗಿದೆ
.
ರಾಜ್ಯ
ಸಚಿವ
ಸಂಪುಟ
ವಿಸ್ತರಣೆಯ
ಪಟ್ಟಿಯಲ್ಲಿ
ಹೆಸರು
ಇಲ್ಲದಿರುವುದು
ಗೊತ್ತಾಗುತ್ತಿದ್ದಂತೆ
ಶಾಸಕರು
ಮೊಬೈಲ್
ಸ್ವಿಚ್
ಆಫ್
ಮಾಡಿಕೊಂಡು
ಯಾರ
ಸಂಪರ್ಕಕ್ಕೂ
ಸಿಗುತ್ತಿಲ್ಲ
.
ಇದರ
ನಡುವೆ
ಅವರ
ಬೆಂಬಲಿಗರು
ಟೈರುಗಳಿಗೆ
ಬೆಂಕಿ
ಹಚ್ಚಿ
ರಸ್ತೆ
ತಡೆ
ನಡೆಸಿದ್ದು
ಧರಣಿಗಳ
ಮೂಲಕ
ಆಕ್ರೋಶ
ವ್ಯಕ್ತಪಡಿಸಲಾಗುತ್ತಿದ್ದಾರೆ
.
ಆ
.
೫
ರಂದು
ಬಾಗೇಪಲ್ಲಿ
ಬಂದ್
ಕೈಗೊಳ್ಳಲು
ಪೂರ್ವಭಾವಿ
ಸಭೆಯಲ್ಲಿ
ಬೆಂಬಲಿಗರು
ನಿರ್ಣಯ
ಕೈಗೊಂಡಿದ್ದಾರೆ
.
ಕಡೆಗಣಿಸಿರುವ
ಪಕ್ಷದ
ವರಿಷ್ಠರ
ನಿಲುವಿಗೆ
ಬೇಸರ
ವ್ಯಕ್ತಪಡಿಸಿದ್ದಾರೆ
.
ಮಾಜಿ
ಸಿ
.
ಎಂ
.
ಸಿದ್ದರಾಮಯ್ಯ
ಹಾಗೂ
ಹಾಲಿ
ಸಿ
.
ಎಂ
.
ಡಿ
.
ಕೆ
.
ಶಿವಕುಮಾರ್
ಹ್ಯಾಟ್ರಿಕ್
ಶಾಸಕ
ಸುಬ್ಬಾರೆಡ್ಡಿಗೆ
ಸಚಿವ
ನೀಡುವ
ಭರವಸೆ
ನೀಡಿದ್ದು
,
ಭರವಸೆ
ಈಡೇರಿಸದ
ಕಾಂಗ್ರೆಸ್
ಪಕ್ಷದ
ವರಿಷ್ಠರ
ನಡೆ
ಬಾಗೇಪಲ್ಲಿ
ವಿಧಾನಸಭಾ
ಕ್ಷೇತ್ರಕ್ಕೆ
ಮಾಡಿರುವ
ಬಹುದೊಡ್ಡ
ದ್ರೋಹವಾಗಿದೆ
ಎಂದು
ಕಾಂಗ್ರೆಸ್
ಯುವ
ಮುಖಂಡ
ಅಮರನಾಥರೆಡ್ಡಿ
ಆಕ್ರೋಶ
ವ್ಯಕ್ತಪಡಿಸಿದ್ದಾರೆ
.