

ಚಿಕ್ಕಬಳ್ಳಾಪುರ: ಗೃಹ ಬಳಕೆಯಅಡುಗೆ ಅನಿಲ ಸಿಲಿಂಡರ್ ವಾಣಿಜ್ಯ ಉದ್ದೇಶಗಳಿಗೆ ಬಳಸಿ ನಿಯಮ ಉಲ್ಲಂಘಿಸುತ್ತಿರುವ ಕೇಂದ್ರಗಳಮೇಲೆ ಅಧಿಕಾರಿಗಳ ತಂಡ ಕಾರ್ಯಾಚರಣೆ ಕೈಗೊಂಡು, ಪ್ರಕರಣ ದಾಖಲಿಸಿದೆ.
ಹೋಟಲ್, ಬೇಕರಿ,ರೆಸ್ಟೋರೆಂಟ್, ಟೀ, ಕಾಂಡಿಮೆಂಟ್ಸ್‌ಸೇರಿದಂತೆ ವಿವಿಧ ವಾಣಿಜ್ಯ ಮಳಿಗೆಗಳಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ದುರ್ಬಳಕೆಯ ಪ್ರಕರಣಗಳುಕಂಡು ಬಂದಿದ್ದು ಇದೇ ವೇಳೆ 45 ಗೃಹ ಬಳಕೆಯ ಅಡುಗೆ ಅನಿಲ್ ಸಿಲಿಂಡರ್ (ಮಾ.೧೬ ಕ್ಕೆ)ವಶಪಡಿಸಿಕೊಳ್ಳಲಾಗಿದೆ.
ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಹಾಗೂ ಎಲ್ ಪಿ ಜಿ ಪೂರೈಕೆ ಆದೇಶ 2000 ರಅನ್ವಯ ಸಂಬಂಧಪಟ್ಟ ಮಾಲೀಕರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಯಾವುದೇ ಕಾರಣಕ್ಕೂ ಗೃಹಬಳಕೆಯ ಅನಿಲ ಸಿಲಿಂಡರ್ ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಬಾರದು. ಒಂದು ವೇಳೆ ನಿಯಮಉಲ್ಲಂಘಿಸಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಪ್ರಭುಎಚ್ಚರಿಕೆ ನೀಡಿದ್ದಾರೆ.