

ಬಾಗೇಪಲ್ಲಿ: ದ್ವಿಚಕ್ರ ವಾಹನದ ಮೇಲೆ ಲಾರಿ ಚಕ್ರ ಹರಿದ ಪರಿಣಾಮ ಇಬ್ಬರು ಬಾಲಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬಾಗೇಪಲ್ಲಿ ತಾಲೂಕು ಗೂಳೂರು ಹೋಬಳಿಯ ಚನ್ನರಾಯನಪಲ್ಲಿಯಲ್ಲಿ ನಡೆದಂತಹ ಭಯಾನಕ ಅಪಘಾತದಲ್ಲಿ ವಿಷ್ಠು (4 ವರ್ಷ) ಹಾಗೂ ವಿಜಯ ರಾಜಕುಮಾರ್( 14 ವರ್ಷ) ಮೃತಪಟ್ಟಿದ್ದಾರೆ. ಚನ್ನರಾಯನಪಲ್ಲಿ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದ ಏಕಮುಖ ರಸ್ತೆಯಲ್ಲಿ ಸಿಮೆಂಟ್ ಲಾರಿ ಹಿಂಬದಿಗೆ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದು ವಿಜಯರಾಜಕುಮಾರ್ ಮತ್ತು ವಿಷ್ಠು ನಿಲ್ಲಿಸಿದ್ದು ಇದನ್ನು ಗಮನಿಸದ ಸಿಮೆಂಟ್ ಲಾರಿ ಚಾಲಕನು ದ್ವಿಚಕ್ರವಾಹನದ ಮೇಲೆ ಹರಿಸಿದ್ದು ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗೂಳೂರು ಹೊರಠಾಣೆ ಪೊಲೀಸರು ಲಾರಿ ಚಾಲಕ ಶ್ರೀನಿವಾಸನನ್ನು ಬಂಧಿಸಿದ್ದು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.