ಅಕ್ರಮ ಸಂಬಂಧಕ್ಕೆ ಬಲಿಯಾದ ವಿವಾಹಿತ ವ್ಯಾಪಾರಿ, ಮಹಿಳೆ

ಮೃತ ಬಾವಾಜಾನ್ ಹಾಗೂ ಸಲ್ಮಾ
ಮೃತ ಬಾವಾಜಾನ್ ಹಾಗೂ ಸಲ್ಮಾ
Published on

ಚಿಕ್ಕಬಳ್ಳಾಪುರ: ಚೇಳೂರು ಪಟ್ಟಣದ ಪದ್ಮನಾಭರಾವ್ ಬಡಾವಣೆಯಲ್ಲಿ ವಿವಾಹಿತನೊಬ್ಬಅಕ್ರಮ ಸಂಬಂಧ ಹೊಂದಿದ ಪ್ರಿಯತಮೆಯ ಕತ್ತು ಕುಯ್ದು ಕೊಂದ ಬಳಿಕ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಲ್ಲಿನ ಪದ್ಮನಾಭರಾವ್ ಬಡಾವಣೆಯ ನಿವಾಸಿ, ಸೀಮೆ ಹಸು, ಕರುಗಳ ವ್ಯಾಪಾರಿ ಬಾವಾಜಾನ್ (42) ಹಾಗೂಈತನ ಪ್ರಿಯತಮೆ ಚೇಳೂರಿನ ಗೆರಿಗಿರೆಡ್ಡಿಪಾಳ್ಯ ಬಡಾವಣೆಯ ಸಲ್ಮಾ (40) ಮೃತರು.

ಈ ಮೊದಲು ತಸ್ಲೀಮ್‌ ಎಂಬುವರನ್ನು ಬಾವಾಜಾನ್‌ ಮದುವೆಯಾಗಿದ್ದು ಈ ಇಬ್ಬರಿಗೆ ಮೂವರು ಗಂಡು ಮಕ್ಕಳಿದ್ದಾರೆ.ಇದರ ನಡುವೆ ಬಾವಾಜನ್‌ ಸಲ್ಮಾಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಪ್ರಿಯಕರ ಹಾಗೂ ಪ್ರಿಯತಮೆ ಇಬ್ಬರಿಗೂಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಗಲಾಟೆ ನಡೆಯುತ್ತಿತ್ತು. ಇದಕ್ಕೆ ಸಲ್ಮಾ ಮತ್ತೊರ್ವ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಎನ್ನುವುದಾಗಿತ್ತು. ಇದರ ವಿಚಾರದ ಗಲಾಟೆಯು ವಿಕೋಪಕ್ಕೆ ಹೋದಾಗ ಆತ ಸಲ್ಮಾಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.ಬಳಿಕ ಅಲ್ಲಿಂದ ತೆರಳಿ ಪದ್ಮನಾಭರಾವ್ ಬಡಾವಣೆಯಲ್ಲಿನ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯ ಸ್ಥಳಕ್ಕೆ ಎಸ್ಪಿ ಕುಶಾಲ್ ಚೌಕ್ಸೆ, ಡಿವೈಎಸ್ಪಿ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿಮಾಹಿತಿ ಪಡೆದುಕೊಂಡಿದ್ದು ಚೇಳೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ಹೆಂಡತಿಯನ್ನು ಅಕ್ರಮ ಸಂಬಂದ ಹೊಂದಿದ್ದ ಬಾವಾಜಾನ್ ಕೊಲೆ ಮಾಡಿದ್ದಾನೆಂದು ಮೃತ ಸಲ್ಮಾಳ ಗಂಡ ಮಸ್ತಾನ್ ಹಾಗೂ ತನ್ನ ಗಂಡನ ಸಲ್ಮಾಳಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಾವಾಜಾನ್ ಹೆಂಡತಿ ತಸ್ಲೀಮ್ ದೂರು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net