ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಕುಸಿತ, ಬೆಂಬಲ ಬೆಲೆ ನಿರೀಕ್ಷೆಯಲ್ಲಿ ರೈತ

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ ಮುಂಭಾಗ ಮಾವಿನ ಹಣ್ಣುಗಳೊಂದಿಗೆ ಪ್ರತಿಭಟಿಸಿದ ರೈತರು
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ ಮುಂಭಾಗ ಮಾವಿನ ಹಣ್ಣುಗಳೊಂದಿಗೆ ಪ್ರತಿಭಟಿಸಿದ ರೈತರು
Published on

ಚಿಕ್ಕಬಳ್ಳಾಪುರ: ಮಾರುಕಟ್ಟೆಯಲ್ಲಿಬೇಡಿಕೆ ಹಾಗೂ ಬೆಲೆ ಕುಸಿತದ ಹಿನ್ನೆಲೆಯಲ್ಲಿ ರೈತರು ಮಾರಾಟದ ಮಾವಿನ ಹಣ್ಣುಗಳಿಗೆ ಸರ್ಕಾರಬೆಂಬಲ ಬೆಲೆ ಘೋಷಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಕಳೆದ 2025-26 ನೇ ಸಾಲಿನಲ್ಲಿ ಮಾವಿನ ಬೆಲೆ ಕುಸಿತದಹಿನ್ನೆಲೆಯಲ್ಲಿ ಕೆ.ಜಿ.ಗೆ 4 ರೂಗಂತೆ ಟನ್‌ ಗೆ 4 ಸಾವಿರ ಬೆಂಬಲ ಬೆಲೆ ಘೋಷಿಸಲಾಗಿತ್ತು.ಅದೇ ರೀತಿ ಬಾರಿ ಉದ್ಭವವಾಗಿರುವ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ನೆರವು ಅಗತ್ಯವಿದೆ. ಪ್ರಸ್ತುತಮಾರುಕಟ್ಟೆಯಲ್ಲಿ ಕೆ.ಜಿ ತೋತಾಪುರಿ 7 ರೂ, ನೀಲಾಂಬರಿ 3 ರೂ ಇದ್ದು ಹೀಗೆ ವಿವಿಧ ಬಗೆಯ ತಳಿಗಳದರ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದಕ್ಕೆ 1 ಟನ್‌ ಗೆ ೧೫ ಸಾವಿರ ರೂ ಬೆಲೆ ಘೋಷಿಸಬೇಕು ಎಂದುರೈತರು ಒತ್ತಾಯಿಸಿದ್ದಾರೆ.

ಹೂವು, ಹಣ್ಣು, ತರಕಾರಿಬೆಳೆಯುವುದರಲ್ಲಿ, ಹಾಲು ಹಾಗೂ ರೇಷ್ಮೆ ಉತ್ಪಾದನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯುಮೊದಲಿನಿಂದಲೂ ಮುಂಚೂಣಿಯಲ್ಲಿದೆ. ಅದರಲ್ಲೂ ಮಾವಿಗೂ ಹೆಸರುವಾಸಿ. ಇಲ್ಲಿ ಸರಾಸರಿ 8612.27 ಹೆ.ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು 1,29,184 ಟನ್‌ ಮಾವು ಇಳುವರಿ ಪ್ರಮಾಣ ಇದೆಎನ್ನುವುದು ತೋಟಗಾರಿಕೆಯ ಅಧಿಕಾರಿಗಳು ಮಾತು. ಇದರ ನಡುವೆ ಜಿಲ್ಲೆಯ ಮಾವು ಬೆಳೆಗಾರರು ಅನೇಕಸಮಸ್ಯೆಗಳನ್ನು ಎದುರಿಸುತ್ತಿರುವುದರ ನಡುವೆ ಬೆಲೆ ಕುಸಿತವು ಪ್ರಮುಖವಾಗಿದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net