ಡ್ರಾಪ್ ಮಾಡುವುದಾಗಿ ಹೇಳಿ, ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ದುರುಳ

ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿ ಗಣೇಶ್
ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿ ಗಣೇಶ್
Published on
ಚಿಕ್ಕಬಳ್ಳಾಪುರ: ಮನೆಗೆ ಕರೆದುಕೊಂಡು ಹೋಗಿ ಬಿಡುವ ನೆಪದಲ್ಲಿ ಯುವಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದು ಇಡೀ ರಾತ್ರಿ ‌ನಿದರ್ಯಿಯಾಗಿ ಕಿರುಕುಳ ನೀಡಿದ ಬಳಿಕ ಗ್ರಾಮದ ಹೊರ ವಲಯದಲ್ಲಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ.  
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದ ಗಣೇಶ್‌ ಬಂಧಿತ ಆರೋಪಿ. ಬಟ್ಟೆ ಹರಿದ ಸ್ಥಿತಿಯಲ್ಲಿ ನಿತ್ರಾಣಗೊಂಡು ಅಳುತ್ತಿದ್ದ ಸಂತ್ರಸ್ಥೆಗೆ ಪೊಲೀಸರು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯು ಇನ್ನೂ ಅಘಾತ ಸ್ಥಿತಿಯಲ್ಲಿದ್ದಾಳೆ. ಇದಕ್ಕೆ ನುರಿತ ತಜ್ಞರು ಕೌನ್ಸೆಲಿಂಗ್‌ ನಡೆಸುತ್ತಿದ್ದು ಪೆರೇಸಂದ್ರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕೇಸು ದಾಖಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಡುಬಡತನದಲ್ಲಿ ಬೆಳೆದಿರುವ ಸಂತ್ರಸ್ಥೆಗೆ ತಂದೆ ಇಲ್ಲ. ತಾಯಿ ಆರೈಕೆಯಲ್ಲಿ ಬೆಳೆದಿದ್ದು ಬಾಗೇಪಲ್ಲಿಯ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದಳು. ಸಂಜೆ ಮತ್ತೆ ಊರಿಗೆ ಹೋಗಲು ಪೆರೇಸಂದ್ರ ಕ್ರಾಸ್‌ ಬಳಿ ನಿಂತಿದ್ದಳು. ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಗಣೇಶ್‌, ಬಾಲಕಿಯನ್ನು ಊರಿಗೆ ಬಿಡುವುದಾಗಿ ಹೇಳಿದ್ದಾನೆ. ಬೈಕಿನಲ್ಲಿ ಕುಳ್ಳರಿಸಿಕೊಂಡು ತೋಟದ ರಸ್ತೆಯ ಮೂಲಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಅತ್ಯಾಚಾರವೆಸಗಿದ್ದಾನೆ. ಇಡೀ ರಾತ್ರಿ ಕಿರುಕುಳ ನೀಡಿದ್ದು ಪರಿಪರಿಯಾಗಿ ಬೇಡಿಕೊಂಡರೂ ಸಹ ಆತನ ಮನಸ್ಸು ಕರಗಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net